ಕೆವಿಜಿ ಕ್ಯಾಂಪಸ್‌

ಸುಳ್ಯ: ಎನ್.ಎಂ.ಸಿ ಪ್ರಾಜೆಕ್ಟ್ ಪ್ರಪೋಸಲ್ಸ್ & ಫಂಡಿಂಗ್ ಏಜೆನ್ಸೀಸ್ ಕುರಿತಾಗಿ ಏಕದಿನ ಕಾರ್ಯಾಗಾರ

417

ಸುಳ್ಯ: ಎನ್.ಎಂ.ಸಿ ಪ್ರಾಜೆಕ್ಟ್ ಪ್ರಪೋಸಲ್ಸ್ & ಫಂಡಿಂಗ್ ಏಜೆನ್ಸೀಸ್ ಕುರಿತಾಗಿ ಏಕದಿನ ಕಾರ್ಯಾಗಾರ

ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಂಶೋಧನಾ ಸಂಘ ಮತ್ತು ಗ್ರಂಥಾಲಯ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ “ಪ್ರಾಜೆಕ್ಟ್ ಪ್ರಪೋಸಲ್ಸ್ & ಫಂಡಿಂಗ್ ಏಜೆನ್ಸೀಸ್'” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಿನೇಶ ಪಿ.ಟಿ ಭಾಗವಹಿಸಿ ಯೋಜನಾ ಪ್ರಸ್ತಾವನೆಯನ್ನು ಸಿದ್ಧಪಡಿಸುವ ವಿಧಾನ, ಎದುರಾಗುವ ಸಮಸ್ಯೆಗಳು, ಕಾರ್ಯವಿಧಾನಗಳು, ಹಣಕಾಸು ಸಂಸ್ಥೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಹಣಕಾಸಿನ ಯೋಜನಾ ಪ್ರಸ್ತಾವನೆ ಸಲ್ಲಿಸುವ ಕ್ರಮಬದ್ಧತೆ ವಿವರಿಸಿದರು.

ಮುಖ್ಯ ಅತಿಥಿಯಾಗಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಾರಾದ ಡಾ. ಮಮತ ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಿಸಿದ ಕಾಲೇಜಿನ ಗ್ರಂಥಪಾಲಕರಾದ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. ಸಸ್ಯಶಾಸ್ತ್ರ ಉಪನ್ಯಾಸಕಿ ಕೃತಿಕಾ ಕೆ.ಜೆ. ಪ್ರಾರ್ಥಿಸಿ, ಹಿಂದಿ ಉಪನ್ಯಾಸಕರಾದ ಮಮತಾ ಎಚ್.ವಿ. ಸ್ವಾಗತಿಸಿ, ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪಿ.ಪಿ. ವಂದಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಎಂ. ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ವಿಷ್ಣುಪ್ರಶಾಂತ್, ಅಜಿತ್ ಕುಮಾರ್ ಸಹಕರಿಸಿದರು. ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

See also  ಸುಳ್ಯ: ವಿಜ್ಞಾನ ವಿಭಾಗದಲ್ಲಿ ಸುಳ್ಯ ತಾಲೂಕಿಗೆ ಅಗ್ರ ಸ್ಥಾನ ಗಳಿಸಿದ ಪ್ರತಿಷ್ಠಿತ ಎನ್ನೆoಪಿಯುಸಿ ವಿದ್ಯಾರ್ಥಿಗಳು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget