ಕರಾವಳಿರಾಜಕೀಯ

ಕಾಂಗ್ರೆಸ್‌ನಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶತ ಸೀಯಾಳಾಭಿಷೇಕ

266

ನ್ಯೂಸ್‌ ನಾಟೌಟ್‌: ಲೋಕ ಸುಭಿಕ್ಷೆ ಹಾಗೂ ಕಲ್ಯಾಣಾರ್ಥ, ಭೂಮಿಗೆ ಮಳೆಯ ಕೃಪೆಗಾಗಿ ಶುಕ್ರವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶತ ಸೀಯಾಳಾಭಿಷೇಕ, ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.

ಕರಾವಳಿ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಜಲಕ್ಷಾಮದಿಂದ ಕರಾವಳಿಯ ಬಹುತೇಕ ನದಿಮೂಲ, ಬಾವಿ, ಕೆರೆ, ಬೋರ್‌ವೆಲ್ ಬತ್ತಿದ್ದು, ಕೃಷಿ ಚಟುವಟಿಕೆಗಳ ಜತೆ ಕುಡಿಯುವ ನೀರಿನ ಕೊರತೆಯಾಗಿದೆ. ಇನ್ನೂ ಮಳೆ ವಿಳಂಬವಾಗುವ ಮುನ್ಸೂಚನೆಯಿದ್ದು, ಶೀಘ್ರ ಮಳೆಯಾಗಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ,ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕ್ಷೇತ್ರದ ಕೋಶಾಧಿಕಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಹಿಳಾ ಘಟಕದ ನಾಯಕಿ ಶಾಲೆಟ್ ಪಿಂಟೋ, ಕಾರ್ಪೊರೇಟರ್‌ಗಳಾದ ಭಾಸ್ಕರ್ ಮೊಯ್ಲಿ, ಶಶಿಧರ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಡಿ.ಕೆ.ಅಶೋಕ್, ಅಪ್ಪಿ, ಕಾಂಗ್ರೆಸ್ ಮುಖಂಡರಾದ ಸತೀಶ್ ಪ್ರಭು, ಗೆಜ್ಜೆಗಿರಿ‌ ಕ್ಷೇತ್ರದ ಉಪಾಧ್ಯಕ್ಷ ರವಿ ಚಿಲಿಂಬಿ, ವಕ್ತಾರ ರಾಜೇಂದ್ರ ಚಿಲಿಂಬಿ ಸೇರಿದಂತೆ ಹಲವರು ಇದ್ದರು.

See also  ಹಿಂದೂ ಕಾರ್ಯಕರ್ತನಿಗೆ ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಯ ತಮ್ಮನಿಂದ ಜೀವ ಬೆದರಿಕೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget