ಕೊಡಗುಸುಳ್ಯ

ಕಲ್ಲುಗುಂಡಿ ಶ್ರೀ ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ (ನಿ) ವಿಶೇಷ ಠೇವಣಿ ಸಂಗ್ರಹ ಮತ್ತು ಸಾಲ

ನ್ಯೂಸ್ ನಾಟೌಟ್: ಪ್ರತಿಯೊಬ್ಬರು ಕೂಡ ತಮ್ಮ ಕುಟುಂಬದವರ, ಮಕ್ಕಳ ಭವಿಷ್ಯದ ಕಡೆ ಗಮನ ಹರಿಸುತ್ತಾರೆ. ದುಡಿದ ಹಣವನ್ನು ಯಾವ ಬ್ಯಾಂಕ್‌ನಲ್ಲಿ ಠೇವಣಿ ಮಾಡುವುದು ಎಂದು ಚಿಂತಿಸುತ್ತಾರೆ. ಈ ಬಗ್ಗೆ ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಶ್ರೀ ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ (ನಿ) ವಿಶೇಷ ಠೇವಣಿ ಸಂಗ್ರಹ ಮತ್ತು ಸಾಲ ಸೌಲಭ್ಯವನ್ನು ಪರಿಚಯಿಸುತ್ತಿದೆ.

ಕಳೆದ ಹಲವು ವ‍ರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ 600ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಗ್ರಾಮೀಣ ಭಾಗದ ಜನತೆಗೆ ಸುಲಭ ವಿಧಾನದಲ್ಲಿ ಸಾಲ ಸೌಲಭ್ಯ ಮತ್ತು ಠೇವಣಿಗಳಿಗೆ ಅವಕಾಶವಿದೆ.

ಪಾರದರ್ಶಕತೆಗೆ ಆದ್ಯತೆ

ಬ್ಯಾಂಕಿನ ಎಲ್ಲಾ ವ್ಯವಹಾರಗಳು ಬ್ಯಾಂಕಿಂಗ್ ಸಾಪ್ಟ್‌ವೇರ್‌ ಮೂಲಕ ನಡೆಯುತ್ತದೆ. ಸದಸ್ಯರ, ಗ್ರಾಹಕರ ಪಿಗ್ನಿ ಖಾತೆಗಳು, ನಿರಖು ಠೇವಣಿಗಳು , ಮಾಸಿಕ ಖಾತೆಗಳು ಕಂಪ್ಯೂಟರೀಕರಣಗೊಂಡು ನಿಖರವಾಗಿ, ಪಾರದರ್ಶಕವಾಗಿ ಭದ್ರತೆಯೊಂದಿಗೆ ಬ್ಯಾಂಕ್ ತನ್ನ ಕಾರ್ಯ ನಿರ್ವಹಿಸುತ್ತಿದೆ. ಪ್ರತೀ ಗ್ರಾಹಕರ ಠೇವಣಿಗಳಿಗೆ ಶೇ. 8.60 ಬಡ್ಡಿದರ ನೀಡಲಾಗುತ್ತದೆ. ವಿಶೇಷವಾಗಿ ಹಿರಿಯ ನಾಗರಿಕ, ಮಹಿಳೆಯರು, ಸೈನಿಕರು ಮತ್ತು ಮಾಜಿ ಸೈನಿಕರ ಠೇವಣಿಗಳಿಗೆ ಶೇ.0.50ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುವುದು. ಅದಲ್ಲದೇ ಯಾವುದೇ ಸಾಲ ಪಡೆದರೂ ಕಡಿಮೆ ಬಡ್ಡಿದರದಲ್ಲಿ ಹಾಗೂ ತ್ವರಿತವಾಗಿ ಕ್ಲಪ್ತ ಸಮಯದಲ್ಲಿ ನೀಡಲಾಗುವುದು.

ಬ್ಯಾಂಕ್‌ನಲ್ಲಿ ಸ್ವೀಕರಿಸುವ ಠೇವಣಿಗಳು : ಉಳಿತಾಯ ಖಾತೆ, ಚಾಲ್ತಿ ಖಾತೆ, ನಿರಖು ಖಾತೆ, ಶ್ರೀ ಅಮ್ಮನ್ ಪಿಗ್ಮಿ ಠೇವಣಿ, ಶ್ರೀ ಅಮ್ಮನ್ ‍ಷೇರು ನಗದು ಪತ್ರಕ್ಕೆ ಸೌಲಭ್ಯಗಳಿವೆ.

ಪಿಗ್ಮಿ ಸಾಲ, ಜಾಮೀನು ಸಾಲ & ವ್ಯಾಪಾರ ಸಾಲ, ಗೃಹ ಸಾಲ & ದುರಸ್ಥಿ ಸಾಲ, ವೇತನಾಧಾರಿತ ಸಾಲ, ಭೂ ಅಡಮಾನ ಸಾಲ, ಭೂಮಿ ಖರೀದಿ ಸಾಲ, ವಾಹನ ಸಾಲ & ಚಿನ್ನಾಭರಣ ಈಡಿನ ಸಾಲ ನೀಡಲಾಗುವುದು ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

Related posts

ಸಂಪಾಜೆ ಗಡಿಯಲ್ಲಿ ನಕ್ಸಲರು..!ಈ ಸುದ್ದಿ ನಿಜವೇ?

ಮಡಿಕೇರಿ: ಗೂಗಲ್‌ನಲ್ಲಿಅತೀ ಹೆಚ್ಚು ಹುಡುಕಲ್ಪಟ್ಟ ಪಟ್ಟಿಯಲ್ಲಿ ಕೊಡಗಿನ ಹೆಸರು..!2023ರಲ್ಲಿ ಭಾರತೀಯರು ಸರ್ಚ್ ಮಾಡಿದ ಟಾಪ್ 10 ಪ್ರವಾಸಿ ತಾಣಗಳು ಯಾವುವು ಗೊತ್ತಾ?

ಸುಳ್ಯ:ಕಳೆದ ಒಂದು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ನಿಧನ,ಕಣ್ಣೀರಲ್ಲಿ ಕುಟುಂಬ..