ನ್ಯೂಸ್ ನಾಟೌಟ್ : ನೆಹರೂ ಮೆಮೋರಿಯಲ್ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಮಾನವಿಕ ಸಂಘದ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾ.28ರಂದು ಕಾಲೇಜು ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರುದ್ರ ಕುಮಾರ್ ಎಮ್ ಎಮ್ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಒ.ಬಿ.ಜಿ ವಿಭಾಗದ ಪ್ರೊ. ಡಾ ರವಿಕಾಂತ್ ಜಿ.ಒ. ಭಾಗವಹಿಸಿ ಹೋಲಿಸ್ಟಿಕ್ ಹೆಲ್ತ್ : ಬ್ಯಾಲೆನ್ಸಿಂಗ್ ಲೈಫ್ ಫಾರ್ ವೆಲ್ ನೆಸ್ ವಿಷಯದ ಕುರಿತಾದ ವಿಶೇಷ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ.ಡಿ ಹಾಗೂ ಐ.ಕ್ಯೂ.ಎ.ಸಿ ನಿರ್ದೇಶಕರಾದ ಡಾ ಮಮತಾ ಕೆ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರಥಮ ಬಿ. ಬಿ. ಎ ವಿದ್ಯಾರ್ಥಿ ಅಕ್ಷತ್ ಪ್ರಾರ್ಥಿಸಿದರು, ಅಂತಿಮ ಬಿ. ಕಾಂ ವಿದ್ಯಾರ್ಥಿ ಆದಿತ್ಯ ಸ್ವಾಗತಿಸಿದರು, ಅಂತಿಮ ಬಿ. ಬಿ. ಎ ವಿದ್ಯಾರ್ಥಿ ಸೂರ್ಯ ದರ್ಶನ್ ವಂದಿಸಿ ಅಂತಿಮ ಬಿ. ಕಾಂ ವಿದ್ಯಾರ್ಥಿ ಕೀರ್ತನ್ ಡಿ ನಿರೂಪಿಸಿದರು. ಈ ಸಂದರ್ಭ ಎಲ್ಲಾ ವಿಭಾಗ ಮುಖ್ಯಸ್ಥರು, ಭೋದಕ-ಭೋದಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.