ನ್ಯೂಸ್ ನಾಟೌಟ್: ನಿಮ್ಮಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಆಸಕ್ತಿಯಿದೆಯೇ..? ಕೃಷಿ ಮಾಹಿತಿ, ಆಹಾರೋತ್ಪನ್ನಗಳ ಮೌಲ್ಯವರ್ಧನೆ ಮಾಡುವ ಕ್ರಮ, ಆಟಿ ತಿಂಗಳ ವಿಶೇಷ ತಿಂಡಿ ತಿನಿಸಿಗಳನ್ನು ರುಚಿ ನಿಮಗೂ ಬೇಕೆ..? ಹಾಗಿದ್ದರೆ ಆ.1 ರಿಂದ ಆ.3ರವರೆಗೆ ತೊಕ್ಕೋಟು ಸಮೀಪದ ಕೋಟೆಕಾರ್ ಬೀರಿ ಕೆವಿಎಸ್ಎಸ್ ಕನ್ವೆನ್ಶನ್ ಹಾಲ್ ನಲ್ಲಿ ಹಲಸು ಮೇಳ, ಆಟಿ ಆಹಾರೋತ್ಸವ, ಕೃಷಿ ಪ್ರೇರಣೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇಳದ ವಿಶೇಷ: ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಪರಿಣತಿ ಪಡೆದ ಅನುಭವಿ ಕೃಷಿಕರಿಂದ ಲಾಭದಾಯಕ ಕೃಷಿ ತರಬೇತಿ, ವಿವಿಧ ಸರಕಾರಿ ಇಲಾಖೆಗಳಿಂದ ಮಾಹಿತಿ, ಜೇನು ಕೃಷಿ, ಹಲಸು ಮೌಲ್ಯ ವರ್ಧನೆ ತರಬೇತಿ, ಕೃಷಿಯೆಡೆಗೆ ನಡಿಗೆ ಕಾರ್ಯಕ್ರಮ ಉದ್ಘಾಟನೆ, ಹಡಿಲುಭೂಮಿ ಕೃಷಿ ಚಾಲನೆ, ಕೈತೋಟ ಕ್ರಾಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಶೇಷ ತಿಂಡಿ-ತಿನಿಸು: ಸ್ಟಾಲ್ ಗಳಲ್ಲಿ ಕೆಂಪು ಹಲಸು, ಚಂದ್ರಹಲಸು, ಹಲಸಿನ ಹೋಳಿಗೆ, ಜಿಲೇಬಿ, ಹಪ್ಪಳ, ಚಿಪ್ಸ್, ಹಲಸು ಮಂಚೂರಿ, ಹಲಸಿನ ಗಟ್ಟಿ, ದೋಸೆ,ಹಲಸಿನ ಐಸ್ ಕ್ರೀಂ, ಆಟಿ ಸ್ಪೆಷಲ್ ಪತ್ರೋಡೆ, ಕಣಿಲೆ ಖಾದ್ಯ, ಕೆಸುವಿನ ಖಾದ್ಯ, ತಜಂಕ್ ಪತ್ರೋಡೆ, ಸಾವಯವ ಸಿರಿಧಾನ್ಯ ಉತ್ಪನ್ನಗಳು, ಖಾದಿ ಉತ್ಪನ್ನಗಳು, ಹ್ಯಾಂಡ್ ಮೇಡ್ ವಸ್ತುಗಳು, ತರಕಾರಿ ಮತ್ತು ಹಣ್ಣಿನ ಗಿಡಗಳ ಮಾರಾಟ, ನೈಸರ್ಗಿಕ ಹಣ್ಣಿನ ರಸ, ಪರಿಶುದ್ಧ ಜೇನು, ತಾಜಾ ಕಲ್ಪರಸ.. ಇನ್ನೂ ಹಲವಾರು ನೈಸರ್ಗಿಕ ಉತ್ಪನ್ನಗಳ ಪ್ರದರ್ಶನ, ಸಮಗ್ರ ಮಾಹಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ : 8618140100, 9035318553 ಸಂಪರ್ಕಿಸಬಹುದು.