ರಾಜ್ಯವೈರಲ್ ನ್ಯೂಸ್

ಸ್ಪೇನ್ ಹುಡುಗನ ಕೈ ಹಿಡಿದ ಕರ್ನಾಟಕದ ಯುವತಿ, ಈಶಾ ಫೌಂಡೇಶನ್‌ ನ ಯೋಗ ಶಿಕ್ಷಕಿಯ ಪ್ರೇಮ ಕಥೆ

232

ನ್ಯೂಸ್ ನಾಟೌಟ್: ಪ್ರೀತಿಗೆ ಯಾವುದೇ ಜಾತಿ, ಗಡಿ, ಭಾಷೆಯ ಹಂಗಿಲ್ಲ, ಎಲ್ಲಿಯ ಮಂಡ್ಯ, ಎಲ್ಲಿಯ ಸ್ಪೇನ್. ಮಂಡ್ಯದ ಯುವತಿಯನ್ನು ಸ್ಪೇನ್‌ನ ಯುವಕನೊಬ್ಬ ಮದುವೆಯಾಗಿದ್ದಾನೆ. ಕೆ.ಆರ್.ಪೇಟೆ ಪಟ್ಟಣದ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ಜಾನ್‌ವೈಡಲ್ ಮತ್ತು ಬಿ.ಆರ್.ದೀಕ್ಷಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಶಮಂತ್ ಟೆಕ್ಸ್‌ಟೈಲ್ಸ್‌ ಮಾಲೀಕರಾದ ರವೀಂದ್ರನಾಥ್ ಅವರ ಪುತ್ರಿ ದೀಕ್ಷಿತಾ ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಸ್ಪೇನ್ ದೇಶದ ಬಾರ್ಸಿಲೋನ ನಗರದ ಯುವಕ ಜಾನ್‌ವೈಡಲ್ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿತ್ತು. ಇಶಾ ಫೌಂಡೇಶನ್ ಮುಖ್ಯಸ್ಥರಾದ ಸದ್ಗುರು ಜಗ್ಗಿವಾಸುದೇವ್ ಮೂಲಕ ಎರಡೂ ಕುಟುಂಬಗಳ ಮನವೊಲಿಸಿದ ಪರಿಣಾಮವಾಗಿ ಸೋಮವಾರ(ಎ.೨೯) ಕೆ.ಆರ್.ಪೇಟೆ ಪಟ್ಟಣದಲ್ಲಿ ಸಂಪ್ರದಾಯ ಬದ್ದವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವರ ಜಾನ್‌ವೈಡಲ್ ತಂದೆತಾಯಿಗಳು, ಸಹೋದರ, ಸಹೋದರಿ ಸೇರಿದಂತೆ ವಧುವಿನ ತಂದೆ-ತಾಯಿಗಳು, ಬಂಧುಗಳು, ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ವಿದೇಶಿ ವರನೊಂದಿಗೆ ಕನ್ನಡದ ಹುಡುಗಿ ಕೆ.ಆರ್.ಪೇಟೆಯ ಹುಡುಗಿ ಧೀಕ್ಷಿತಾ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಾನ್‌ವೈಡಲ್ ತುಂಬಾ ಒಳ್ಳೆಯ ಹುಡುಗ ನಾನೇ ಹುಡುಕಿದ್ದರೂ ನನ್ನ ಮಗಳಿಗೆ ಇಂತಹ ಒಳ್ಳೆಯ ಸಂಬಂಧವನ್ನು ಹುಡುಕಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಾ ದೈವೇಚ್ಚೆ ಮಗಳ ಆಸೆಗೆ ಪ್ರೋತ್ಸಾಹ ನೀಡಿ ಮದುವೆ ಮಾಡಿಕೊಟ್ಟಿದ್ದೇವೆ ಎನ್ನುತ್ತಾರೆ ದೀಕ್ಷಿತಾ ತಂದೆ ರವೀಂದ್ರ ನಾಥ್ ಹೇಳಿದ್ದಾರೆ.

See also  ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ, ಪೊಲೀಸರಿಗೆ ಸಿಕ್ಕಿದ ಪತ್ರದಲ್ಲೇನಿದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget