ಭಕ್ತಿಭಾವ

ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ವಿಜೃಂಭಣೆಯ ಆಯುಧ ಪೂಜೆ

234
Spread the love

ಸೌತಡ್ಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಶ್ರದ್ದಾ ಭಕ್ತಿಯಿಂದ ಆಯುದ್ಧ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಊರ-ಪರವೂರ ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದು ತಮ್ಮ ವಾಹನಗಳಿಗೆ ಪೂಜೆ ಮಾಡಿಸಿಕೊಂಡು, ಭಕ್ತಿಯಿಂದ ದೇವರಿಗೆ ನಮಿಸಿ ಬರುವಂತಹ ಎಲ್ಲ ಕಷ್ಟವನ್ನು ನಿವಾರಿಸಿಕೊಡು ಎಂದು ವಿಘ್ನ ನಿವಾರಕನನ್ನು ಬೇಡಿಕೊಂಡರು.

ಸೌತಡ್ಕ ದೇವಸ್ಥಾನಕ್ಕೆತನ್ನದೇ ಆದ ವಿಶೇಷ ಇತಿಹಾಸ ಪರಂಪರೆಯಿದೆ. ಮನದಲ್ಲಿ ದೇವರನ್ನು ನೆನೆದು ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಅನ್ನುವ ನಂಬಿಕೆ ಭಕ್ತರದ್ದಾಗಿದೆ.

See also  ಸಂಪಾಜೆ: ಹನುಮಂತ ಗುಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ
  Ad Widget   Ad Widget   Ad Widget