ಕರಾವಳಿ

ಸೌಜನ್ಯ ಅತ್ಯಾಚಾರ-ಹತ್ಯೆ ಪ್ರಕರಣ ವರದಿ ಹಿನ್ನೆಲೆ, ನ್ಯೂಸ್ ನಾಟೌಟ್, Tv9, ಝೀ ಕನ್ನಡ, ವಿಜಯ ಕರ್ನಾಟಕ ಸೇರಿದಂತೆ 54 ಮಾಧ್ಯಮಗಳಿಗೆ ಕೋರ್ಟ್ ನೋಟಿಸ್

ನ್ಯೂಸ್ ನಾಟೌಟ್: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನ ಹಾನಿ ಆಗುವಂತೆ ವರದಿ ಮಾಡಲಾಗಿದೆ ಎಂದು ನ್ಯೂಸ್ ನಾಟೌಟ್ ಸೇರಿದಂತೆ ರಾಜ್ಯದ ಪ್ರಮುಖ 61 ಮಾಧ್ಯಮಗಳಿಗೆ ನೋಟಿಸ್ ನೀಡಲಾಗಿದೆ.

ಸೌಜನ್ಯ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬ ಸದಸ್ಯರ, ಸಂಸ್ಥೆಗಳ ಬಗ್ಗೆ ಮಾನ ಹಾನಿಕರ ವರದಿ ಪ್ರಸಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋಗಳನ್ನು ಡಿಲಿಟ್ ಮಾಡಬೇಕೆಂದು ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಕ್ಷನ್ ಕೋರ್ಟ್ ನಲ್ಲಿ ದೂರು ದಾಖಲಿಸಲಾಗಿತ್ತು. ಕೋರ್ಟ್ ೧೬ ಪುಟಗಳ ಆದೇಶವನ್ನು ಹೊರಡಿಸಲಾಗಿತ್ತು.

ಪ್ರಮುಖವಾಗಿ ಏಳು ಜನರಿಗೆ ಹಾಗೂ 54 ಮಾಧ್ಯಮಗಳಿಗೆ ಕೋರ್ಟ್ ನೋಟಿಸ್ ನೀಡಲಾಗಿದೆ. ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ, ಜಗದೀಶ್, ಪ್ರಭಾ ಎನ್. ಬೆಳವಾನಗಳ, ಸೋಮನಾಥ್ ನಾಯಕ್‌, ಬಿ.ಎಂ.ಭಟ್‌, ವಿಠಲ್ ಗೌಡ, ಒಡನಾಡಿ, ದೃಶ್ಯ ಮಾಧ್ಯಮ, ವೆಬ್‌ ಸೈಟ್‌, ಪತ್ರಿಕೆ, ಯೂಟ್ಯೂಬ್‌, ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಗೂಗಲ್‌ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ.

Related posts

ಕಲ್ಲುಗುಂಡಿ: ಕಾರು – ರಿಕ್ಷಾ ಡಿಕ್ಕಿ ; ರಿಕ್ಷಾ ಪಲ್ಟಿ,ಕಾರು ಜಖಂ;ರಿಕ್ಷಾ ಚಾಲಕನ ತಲೆಗೆ ಗಾಯ

ಸಾಲು ಮರದ ತಿಮ್ಮಕ್ಕಗೆ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ

ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ, ದೇವಿ ದರ್ಶನಕ್ಕೆ ನಿರ್ಬಂಧ..! ಮಹಿಷ ದಸರಾ ಆಚರಣೆಯ ಸಂಘರ್ಷ..!