ಕರಾವಳಿಕ್ರೈಂ

ಸೌಜನ್ಯ ಪ್ರಕರಣದ ಬಗ್ಗೆ ನಟ ಅಹಿಂಸಾ ಚೇತನ್ ಹೇಳಿದ್ದೇನು? ಭಾರಿ ಚರ್ಚೆಗೆ ಕಾರಣವಾದ ನಟನ ಪೋಸ್ಟ್ ನಲ್ಲಿ ಅಂತದ್ದೇನಿದೆ?

ನ್ಯೂಸ್‌ ನಾಟೌಟ್‌: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ ಎಂದು ಪ್ರಶ್ನೆ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

“ದೇಗುಲ ಪಟ್ಟಣವಾದ ಧರ್ಮಸ್ಥಳದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯಳ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿ 11 ವರ್ಷಗಳೇ ಕಳೆದರೂ, ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ. ಪೊಲೀಸರು, ವೈದ್ಯರು, ವ್ಯವಸ್ಥೆಯ ತನಿಖೆಯಲ್ಲಿನ ವೈಫಲ್ಯಗಳನ್ನು ಕುಟುಂಬ ಮತ್ತು ಕಾರ್ಯಕರ್ತರು ಬಹಿರಂಗಪಡಿಸಿದ್ದಾರೆ. ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ? ಅವರು ಅಪರಾಧದಲ್ಲಿ ತಮ್ಮದೆ ಆದ ಪಾಲ್ಗೊಳ್ಳುವಿಕೆಯನ್ನು ಮರೆಮಾಡುತ್ತಿದ್ದಾರಾ?” ಎಂದು ಚೇತನ್‌ ಪ್ರಶ್ನೆ ಮಾಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿರುವ ಮತ್ತು ಹೋರಾಟಗಳು ನಡೆಯುತ್ತಿರುವ ಮಧ್ಯೆ ಕೆಲ ನಟರೂ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವು ವಿಶೇಷ. ‘ನ್ಯಾಯ ಸಿಗುವವರೆಗೂ ಧರ್ಮಸ್ಥಳಕ್ಕೆ ತೆರಳುವುದೇ ಬೇಡ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.ಇದೀಗ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಅಹಿಂಸಾ ಸಹ ಈ ಬಗ್ಗೆ ತಮ್ಮದೊಂದು ಪ್ರಶ್ನೆಯನ್ನು ಎಲ್ಲರ ಮುಂದಿಟ್ಟು ಈಗ ಸುದ್ದಿಯಲ್ಲಿದ್ದಾರೆ.

Related posts

ನಾಲ್ವರು ನಕ್ಸಲರ ಎನ್‌ಕೌಂಟರ್..! ಭದ್ರತಾ ಪಡೆಗಳ ಕ್ಷಿಪ್ರ ಕಾರ್ಯಾಚರಣೆ

ಬುದ್ಧಿಮಾಂದ್ಯ ಮಗುವನ್ನು ಬಿಟ್ಟು ದಂಪತಿ ಭಾರತಕ್ಕೆ ಪರಾರಿ! ಪೋಷಕರೇ ಕೊಲೆ ಮಾಡಿದರಾ?

ರಾತ್ರಿ ಕರಾವಳಿಗೆ ಅಪ್ಪಳಿಸಿದ ‘ರೆಮಲ್’ ಚಂಡಮಾರುತ..! 1 ಲಕ್ಷ ಮಂದಿಯ ಸ್ಥಳಾಂತರ