ಕರಾವಳಿಕ್ರೈಂ

ಸೌಜನ್ಯ ಸಾವಿನ ತನಿಖೆಗೆ ಬಿಜೆಪಿಯಿಂದ ಒತ್ತಾಯ, ಆ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಶಾಸಕರಿಂದ ಪ್ರತಿಭಟನೆ, ನಳಿನ್ ಕುಮಾರ್ ಹೇಳಿದ್ದೇನು?

300

ನ್ಯೂಸ್ ನಾಟೌಟ್: ಸೌಜನ್ಯ ಸಾವಿನ ತನಿಖೆಗೆ ವಿವಿಧ ಹಿಂದೂ ಸಂಘಟನೆಗಳು, ಸಮಾಜಪರ ಚಿಂತಕರು ಹೊರಟಿರುವ ಬೆನ್ನಲ್ಲೇ ಇದೀಗ ನ್ಯಾಯಕ್ಕಾಗಿ ಸೌಜನ್ಯ ಅನ್ನುವ ಕೂಗನ್ನು ಬಿಜೆಪಿ ಕೂಡ ವ್ಯಕ್ತಪಡಿಸಿದೆ. ಆರೋಪಿಗಳ ಬಂಧನಕ್ಕಾಗಿ ಒತ್ತಾಯಿಸಿದೆ. ಮಾತ್ರವಲ್ಲ ಬೃಹತ್ ಪ್ರತಿಭಟನೆಯನ್ನು ಕೂಡ ಹಮ್ಮಿಕೊಂಡಿದೆ.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಆ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಶಾಸಕರಿಂದ ಪ್ರತಿಭಟನೆ ಆಯೋಜಿಸಲಾಗಿದೆ.

ಸ್ವತಃ ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರತಿಭಟನೆ ಬಳಿಕ ಮರುದಿನ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ನೀಡಲಾಗುವುದು. ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಗುವುದು ಎಂದರು.

೨೦೧೨ರಲ್ಲಿ ಸೌಜನ್ಯಳನ್ನು ಧರ್ಮಸ್ಥಳ ಸಮೀಪದ ಮಣ್ಣ ಸಂಕ ಎಂಬಲ್ಲಿ ಕೊಂದು ಬಿಸಾಕಿ ಹೋಗಲಾಗಿತ್ತು. ಆಗ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರು. ಇವರು ಸಮರ್ಪಕವಾಗಿ ತನಿಖೆ ನಡೆಸಲಿಲ್ಲ.
ಈ ಕಾರಣದಿಂದ ಸೌಜನ್ಯ ಪ್ರಕರಣದ ಹಂತಕರು ಸುಲಭವಾಗಿ ತಲೆಮರೆಸಿಕೊಂಡರು ಅನ್ನುವ ಆರೋಪಗಳು ಕೂಡ ಕೇಳಿ ಬಂದಿದ್ದವು. ಬಿಜೆಪಿ ನಾಯಕರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು.

ಈ ಬೆನ್ನಲ್ಲೇ ಈಗ ಬೆಳ್ತಂಗಡಿಯಲ್ಲಿ ಸೌಜನ್ಯ ಪರ ಬಿಜೆಪಿ ನಾಯಕರು ಪ್ರತಿಭಟನೆಗೆ ಇಳಿದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರಲ್ಲಿ ರಾಜಕೀಯ ಬೆರೆತಿರಬಹುದು ಎಂದು ಕೆಲವರು ಸಂಶಯವನ್ನೂ ಕೂಡ ವ್ಯಕ್ತಪಡಿಸಿದ್ದಾರೆ.

See also  ನಟ ದರ್ಶನ್‌ ಸೇರಿದಂತೆ ಇತರ ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ, 13 ವರ್ಷಗಳ ನಂತರ ಮತ್ತೆ‌ ಜೈಲು ಸೇರಿದ ದಾಸ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget