ನ್ಯೂಸ್ ನಾಟೌಟ್: ಅನುಷ್ಕಾ ಶೆಟ್ಟಿ ,ತೆಲುಗು ಫಿಲ್ಮ್ ಇಂಡಸ್ಟ್ರೀಯಲ್ಲಿ ತಮ್ಮ ವಿಶೇಷ ಅಭಿನಯದ ಮೂಲಕ ಸಿನಿ ಅಭಿಮಾನಿಗಳ ಮನ ಗೆದ್ದವರು. ಮೊದಮೊದಲು ಫುಲ್ ಬೋಲ್ಡ್ ಪಾತ್ರದಲ್ಲಿ ಆಬಿನಯಿಸುತ್ತಿದ್ದರೂ ಬಳಿಕ ‘ರುದ್ರಮ್ಮ ದೇವಿ’, ‘ದೇವಸೇನಾ’, ‘ಭಾಗಮತಿ’ಯಂತಹ ಪಾತ್ರಗಳ ಮೂಲಕ ವಿಶೇಷ ಮನ್ನಣೆ ಪಡೆದವರು. ಹೀಗಾಗಿ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿನ ಅಭಿನಯದ ಮೂಲಕ ಅನುಷ್ಕಾ ಅಪಾರ ಅಭಿಮಾನಿಗಳನ್ನು ಸೆಳೆದಿದ್ದಾರೆ.. !!
ಅನುಷ್ಕಾ ಶೆಟ್ಟಿಗೆ ಈ ಹಿಂದೆಯೇ ಮದುವೆ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.ಸಿನಿಮಾ ನಟರ ಹೆಸರಲ್ಲಿಯೂ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಬಳಿಕ ಅವೆಲ್ಲವನ್ನೂ ಅಲ್ಲಗಳೆದ ಸ್ವೀಟಿಯ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ‘ಬಾಹುಬಲಿ’ ಚಿತ್ರದ ಮೂಲಕ ಇಡೀ ವಿಶ್ವದಾದ್ಯಂತ ಗುರುತಿಸಿಕೊಂಡ ಅನುಷ್ಕಾ 43 ವರ್ಷಗಳ ನಂತರವೂ ಅವಿವಾಹಿತಳಾಗಿದ್ದಾರೆ. ಆದರೆ ಈಗ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಅನುಷ್ಕಾ ಅವರ ವೃತ್ತಿಪರ ಜೀವನದ ಹೊರತಾಗಿ, ಅವರ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಲಕಾಲಕ್ಕೆ ಸುದ್ದಿಗಳು, ವಿಶೇಷವಾಗಿ ಅವರ ಮದುವೆ ಮತ್ತು ಸಂಬಂಧದ ಬಗ್ಗೆ ಬರುತ್ತಲೇ ಇದೆ. ಇತ್ತೀಚೆಗೆ ಅನುಷ್ಕಾ ಟಾಲಿವುಡ್ ನ ಖ್ಯಾತ ನಿರ್ದೇಶಕರೊಬ್ಬರ ಮಗನನ್ನು ಮದುವೆಯಾಗಲಿದ್ದಾರೆ ಎಂದು ಹಲವು ವೆಬ್ ಸೈಟ್ ಗಳಲ್ಲಿ ಸುದ್ದಿಯಾಗಿತ್ತು. ಆದರೆ ಅನುಷ್ಕಾ ಕೂಡ ಇದನ್ನು ನಿರಾಕರಿಸಿದ್ದರು.ಇದಾದ ಬಳಿಕ ನಾಯಕ ಪ್ರಭಾಸ್ ಜೊತೆ ಅನುಷ್ಕಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಸದಾ ವೈರಲ್ ಆಗುತ್ತಲೇ ಇರುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಆದರೆ ಇತ್ತೀಚೆಗೆ ಸ್ವತಃ ಅನುಷ್ಕಾನೇ ತನ್ನ ಮದುವೆಯ ಬಗ್ಗೆ ಮಾತನಾಡಿದ್ದು,ಸಂದರ್ಶನವೊಂದರಲ್ಲಿ, “ನಾನು ವಿವಾಹ ಪದ್ಧತಿಯನ್ನು ನಂಬುತ್ತೇನೆ. ನಾನು ಮದುವೆಗೆ ಎಂದಿಗೂ ವಿರೋಧಿಸುವುದಿಲ್ಲ. ಸಮಯ ಬಂದಾಗ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ” ಎಂದು ಹೇಳಿದ್ದಾರೆ.
ಸ್ಟಾರ್ ಕ್ರಿಕೆಟಿಗನೊಂದಿಗೆ ಮದುವೆ:
ಇತ್ತೀಚೆಗೆ ಅನುಷ್ಕಾ ಮದುವೆಯ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅವರು ಕ್ರಿಕೆಟಿಗನನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವರದಿಗಳಿವೆ. ಈ ಮದುವೆಗೆ ಎರಡೂ ಮನೆಯವರು ಒಪ್ಪಿದ್ದಾರೆ ಎಂದು ವರದಿಯಾಗಿದೆ.ಇದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ, ಆದರೆ ಸದ್ಯ ಈ ಸುದ್ದಿ ಹರಿದಾಡುತ್ತಿದೆ. ಅನುಷ್ಕಾ ಶೆಟ್ಟಿ ಮೂಲತಃ ಮಂಗಳೂರಿನವರು. ಪುತ್ತೂರು ತಾಲೂಕಿನ ಬೆಳ್ಳಿಪಾಡಿಯಲ್ಲಿ ಹುಟ್ಟಿದವರು.