ಕರಾವಳಿಕ್ರೈಂ

ಧರ್ಮಸ್ಥಳ: ಸೌಜನ್ಯಳ ಹುಟ್ಟು ಹಬ್ಬದ ಪ್ರಯುಕ್ತ ಪಾಂಗಳದ ಮನೆಯಲ್ಲಿ ವಿಶೇಷ ಕಾರ್ಯಕ್ರಮ, ಸೌಜನ್ಯ ಪ್ರತಿಮೆ ಪ್ರತಿಷ್ಠಾಪನೆ ಮತ್ತು ಭಜನಾ ಸಂಕೀರ್ತನೆ

ನ್ಯೂಸ್ ನಾಟೌಟ್: ದುಷ್ಟರ ಅಟ್ಟಹಾಸಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡು ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡದೆ ದೂರವಾಗಿರುವ ಕುಮಾರಿ ಸೌಜನ್ಯಳ ಸಾವಿಗೆ ನ್ಯಾಯ ಸಿಗಬೇಕು ಅನ್ನುವ ಒತ್ತಾಯ ಒಂದು ಕಡೆಯಿಂದ ಕೇಳಿ ಬರುತ್ತಿದೆ. ಯಾರು ಅಪರಾಧಿಗಳು ಅನ್ನುವ ಬಗ್ಗೆ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಈ ನಡುವೆ ಅಕ್ಟೋಬರ್ 18ರಂದು ಸೌಜನ್ಯಳ ಮನೆಯಲ್ಲಿ ಆಕೆಯ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಸೌಜನ್ಯ ಜೀವಂತವಾಗಿದ್ದರೆ ಆಕೆ ತನ್ನ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಳು. ಆದರೆ ಆಕೆ ಇಂದು ಕಣ್ಣ ಮುಂದಿಲ್ಲದಿದ್ದರೂ ಸಾವಿರಾರು ಜನರು ಇಂದು ಆಕೆಯ ಸಾವಿಗೆ ನ್ಯಾಯ ಸಿಗಬೇಕು ಅನ್ನುವ ಒತ್ತಾಯದೊಂದಿಗೆ ಬೀದಿಗಿಳಿದಿದ್ದಾರೆ. ಬುಧವಾರ ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಇಲ್ಲಿಯೇ ಭಜನಾ ಸಂಕೀರ್ತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ 6ಕ್ಕೆ ಭಜನೆ ಕಾರ್ಯಕ್ರಮ ಆರಂಭಗೊಂಡಿದೆ. ರಾತ್ರಿ 2 ಗಂಟೆತನಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ, ತಮ್ಮಣ್ಣ ಶೆಟ್ಟಿ, ಸೌಜನ್ಯ ತಾಯಿ ಕುಸುಮಾವತಿ, ಮಾವ ವಿಠಲ ಗೌಡ, ಸೌಜನ್ಯ ಕುಟುಂಬಿಕರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

Related posts

ಉಡುಪಿ: 6ನೇ ಮಹಡಿಯಿಂದ ಜಿಗಿದ 19 ರ ವಿದ್ಯಾರ್ಥಿ..! ಅಷ್ಟಕ್ಕೂ ಪರೀಕ್ಷಾ ಹಾಲ್ ನಲ್ಲಿ ನಡೆದದ್ದೇನು..?

ಶಾಸಕರ ಮೇಲೆ ಜೇನು ನೊಣಗಳ ದಾಳಿ..! ಮುಂದೇನಾಯ್ತು..?

ದಕ್ಷಿಣ ಕನ್ನಡ: ಮಂಗಳೂರು, ಮೂಡಬಿದಿರೆ, ಬೆಳ್ತಂಗಡಿಯಲ್ಲಿ ಮಳೆ ಆರ್ಭಟ, ಯೆಲ್ಲೊ ಅಲರ್ಟ್ ಘೋಷಣೆ