ಕರಾವಳಿ

‘ಸೌಜನ್ಯ ನ್ಯಾಯಕ್ಕಾಗಿ ನೋಟಾಕ್ಕೆ ಮತ ನೀಡಿ’, ಉಜಿರೆಯಿಂದ ಪುಂಜಾಲಕಟ್ಟೆ ತನಕ ಬೃಹತ್ ವಾಹನ ಜಾಥಾ ಆರಂಭ

ನ್ಯೂಸ್ ನಾಟೌಟ್: ಸೌಜನ್ಯ ನ್ಯಾಯಕ್ಕಾಗಿ ಈ ಸಲ ನೋಟಾಕ್ಕೆ ಮತದಾನ ಮಾಡಬೇಕೆಂದು ಕೋರಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ವತಿಯಿಂದ ಉಜಿರೆಯಿಂದ ಪುಂಜಾಲಕಟ್ಟೆ ತನಕ ಬೃಹತ್ ವಾಹನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ನೋಟಾ ಅಭಿಯಾನಕ್ಕಾಗಿ ಈ ವಾಹನ ಜಾಥಾವನ್ನು ಮಾಡಲಾಗಿದೆ.

ಸೌಜನ್ಯ ನ್ಯಾಯದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ , ತಮಣ್ಣ ಶೆಟ್ಟಿ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ಸೌಜನ್ಯಳಿಗೆ ನ್ಯಾಯ ನೀಡುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ಓಟಿಗಾಗುವಾಗ ಮಾತ್ರ ಜನರ ಮುಂದೆ ಹೋಗಿ ಮತ ಕೇಳುತ್ತಿದ್ದಾರೆ. ಇವರಿಗೆ ಮತ ಕೇಳುವ ಹಕ್ಕಿಲ್ಲ. ಹೀಗಾಗಿ ಸೌಜನ್ಯಳ ನ್ಯಾಯಕ್ಕಾಗಿ ನೋಟಾಕ್ಕೆ ಮತಹಾಕಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.

Related posts

ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ, ಗಂಭೀರ ಗಾಯ

ಸುಳ್ಯ:ಎನ್ನೆಂಸಿಯ ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರ ಅಧ್ಯಯನ ಶಿಬಿರ,ಕೃಷಿ ಸಾಧಕರನ್ನು ಭೇಟಿಯಾಗಿ ಸಂದರ್ಶಿಸಿದ ವಿದ್ಯಾರ್ಥಿಗಳು

ಉಗ್ರರಿಂದ ಐದು ಮಂದಿಯ ಜೀವ ಉಳಿಸಿದ ಅರಂತೋಡಿನ ಯೋಧ..!