ಕರಾವಳಿಸುಳ್ಯ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ನ್ಯಾಯಕ್ಕಾಗಿ ಅರಂತೋಡು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬ್ಯಾನರ್

ನ್ಯೂಸ್ ನಾಟೌಟ್: ಭೀಕರ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ಪಾಂಗಳದ ಹುಡುಗಿ ಸೌಜನ್ಯಳಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಒತ್ತಾಯ ಇದೀಗ ಕರಾವಳಿಯಾದ್ಯಂತ ಭಾರಿ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಅಲ್ಲಲ್ಲಿ ಫ್ಲೆಕ್ಸ್‌ ಗಳು ಬೀಳುತ್ತಿವೆ.

ಇದೀಗ ಸುಳ್ಯದ ಹಲವು ಕಡೆ ಫ್ಲೆಕ್ಸ್‌ ಗಳು ಬಿದ್ದಿದ್ದು ಸುಳ್ಯ ಸೇರಿದಂತೆ ಗುತ್ತಿಗಾರಿನಲ್ಲಿ ಯೂ ಫ್ಲೆಕ್ಸ್ ಹಾಕಲಾಗಿತ್ತು. ಇದೀಗ ಸೌಜನ್ಯಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅರಂತೋಡಿನಲ್ಲಿಯೂ ಬ್ಯಾನರ್ ಹಾಕಲಾಗಿದೆ.

ಸೌಜನ್ಯಾಳ ಅತ್ಯಾಚಾರ ಕೊಲೆ ಖಂಡಿಸಿ ಈ ಪ್ರಕರಣವನ್ನು ಮರು ತನಿಖೆ ಮಾಡಬೇಕು ಮತ್ತು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಅರಂತೋಡು ಗ್ರಾಮದ ಅಡ್ತಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಬ್ಯಾನರ್ ಅಳವಡಿಸಲಾಯಿತು.

ಸೌಜನ್ಯ ಹೆಣ್ಣಲ್ಲವೇ? ಹನ್ನೊಂದು ವರ್ಷವಾದರೂ ಈ ಬಡ ಹೆಣ್ಣಿನ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಇನ್ನೂ ಯಾಕೆ ಪತ್ತೆಯಾಗಿಲ್ಲ. ಸೌಜನ್ಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ..? ಹಳ್ಳಿಗೊಂದು ನ್ಯಾಯ ,ದಿಲ್ಲಿಗೊಂದು ನ್ಯಾಯವೇ? ಮಹೇಶ್ ಶೆಟ್ಟಿ ತಿಮರೋಡಿಗೆ ನಮ್ಮ ಸಂಪೂರ್ಣ ಎನ್ನುವ ಫ್ಲೆಕ್ಸ್ ಹಾಕಲಾಗಿದೆ.

ವಿಶೇಷ ತನಿಖಾ ದಳ ಮರು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು. ಸಹೋದರಿ ಸೌಜನ್ಯ ಆತ್ಮಕ್ಕೆ ಶಾಂತಿ ದೊರಕಿಸಿಕೊಡಿಸಲಿ, ಪ್ರಜ್ಞಾವಂತ ನಾಗರಿಕರೇ ಎಚ್ಚೆತ್ತುಕೊಳ್ಳಿ , ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗುವ ತನಕ ನಮ್ಮ ಹೋರಾಟ ಮುಂದುವರಿಯಲಿ ಎಂದು ಅರಂತೋಡು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬ್ಯಾನರ್ ಅಳವಡಿಸಲಾಯಿತು.

Related posts

ಮಂಗಳಮುಖಿಯರು ಯುವಕನನ್ನು ಕಿಡ್ನಾಪ್ ಮಾಡಿದ್ದೇಕೆ..? ಆತನ ಮರ್ಮಾಂಗವನ್ನೇ ಕತ್ತರಿಸಿ ವಿಕೃತಿ ಮೆರೆಯಲು ಕಾರಣವೇನು? ಏನಿದು ಮಂಗಳಮುಖಿಯರ ಅಮಾನವೀಯ ಕೃತ್ಯ?

ಸುಳ್ಯ: ಬಿಜೆಪಿ ಕಚೇರಿಯಲ್ಲಿ ಪೂರ್ವ ಭಾವಿ ಕಸರತ್ತು..! ಮೂರು ದಿನ ‘ಗ್ರಾಮ ಚಲೊ’

ಹಣ್ಣುಗಳನ್ನು ಕಣ್ಣೆದುರಿಗಿಟ್ಟರೂ ಕೆಲಸದಲ್ಲೇ ನಿರತವಾದ ಕಪಿರಾಯ..!ಸರ್ಕಾರಿ ಕಚೇರಿಯಲ್ಲಿ ಕಡತ ನೋಡೋದ್ರಲ್ಲೇ ಫುಲ್ ಬ್ಯುಸಿ..! ವಿಡಿಯೋ ವೈರಲ್