Latest

ಬಾಲಿವುಡ್​ ನಟ ಸೋನು ಸೂದ್ ಪತ್ನಿ ಕಾರು ಭೀಕರ ಅಪಘಾತದಲ್ಲಿ ನಜ್ಜುಗುಜ್ಜು; ಆರೋಗ್ಯ ಸ್ಥಿತಿ ಗಂಭೀರ,ಐಸಿಯುನಲ್ಲಿ ಚಿಕಿತ್ಸೆ

630

ನ್ಯೂಸ್‌ ನಾಟೌಟ್:ಫಿಲ್ಮ್ ಗಳಲ್ಲಿ ವಿಲನ್ ಆಗಿ ಅಭಿನಯಿಸಿದ್ರೂ ಬಡವರ ಬಗ್ಗೆ ಕಾಳಜಿ ಗುಣ ಹೊಂದಿರುವ ಬಾಲಿವುಡ್​ ನ ಹೆಸರಾಂತ ನಟ ಸೋನು ಸೂದ್​ ಅವರ ಪತ್ನಿ ಗಂಭೀರ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋನು ಸೂದ್ ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಪತ್ನಿ ಸೋನಾಲಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಕಾರು ಟ್ರಕ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.ಅಪಘಾತದಲ್ಲಿನ ಕಾರಿನ ಫೋಟೋ ನೋಡಿದಾಗ ಅಪಘಾತ ಅತಿ ವೇಗದಲ್ಲಿ ಸಂಭವಿಸಿದೆ ಎಂದು ತೋರುತ್ತದೆ.

ಕಾರಿನಲ್ಲಿ ಸೋನು ಸೂದ್ ಅವರ ಸಹೋದರಿ ಮತ್ತು ಅವರ ಮಗ ಕೂಡ ಪ್ರಯಾಣಿಸುತ್ತಿದ್ದು ಭಾರಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ.ಇದೀಗ ಎಲ್ಲರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಕಾರು ಅಪಘಾತದ ಫೋಟೋಗಳು ವೈರಲ್​ ಆಗಿದ್ದು, ಇದರಲ್ಲಿ ಕಾರು ನಜ್ಜುಗುಜ್ಜಾಗಿರುವುದನ್ನು ನೋಡಬಹುದು.  ಮುಂಬೈ ನಾಗ್ಪುರ ಹೆದ್ದಾರಿಯ ಬಳಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.  

ಈ ಬಗ್ಗೆ ಮಾತನಾಡಿರುವ ನಟ, ಪತ್ನಿ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಗಂಭೀರ ಗಾಯಗಳಾಗಿವೆ. ಅಪಘಾತ ನೋಡಿದರೆ ಪವಾಡಸದೃಶವಾಗಿ ಜೀವ ಉಳಿದಿದೆ ಎಂದಿದ್ದಾರೆ. ಅಪಘಾತದ ಬಳಿಕ ಸೋನಾಲಿ ಸೂದ್ ಹಾಗೂ ಅವರ ಸಹೋದರಿಯ ಮಗನನ್ನು ನಾಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರಿಗೂ ತೀವ್ರ ಗಾಯಗಳು ಆಗಿವೆ ಎನ್ನಲಾಗಿದೆ. ಕೂಡಲೇ ಸೋನು ಸೂದ್ ಕೂಡ ಆಸ್ಪತ್ರಗೆ ತೆರಳಿದ್ದಾರೆ. ಮುಂದಿನ 48ರಿಂದ 72 ಗಂಟೆಗಳ ಕಾಲ ಇಬ್ಬರನ್ನೂ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ  ವರದಿ ಆಗಿದೆ.

ಸೋನು ಸೂದ್ ನಟನೆಗಿಂತಲೂ ಹೆಚ್ಚಾಗಿ ಅವರು ಸಮಾಜ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ.ಇದೇ ಕಾರಣಕ್ಕೆ ಜನರು ಇವರನ್ನು ‘ರಿಯಲ್ ಹೀರೋ’  ಎಂಬ ಹೆಸರಿನಿಂದ ಕರೆಯುತ್ತಾರೆ. ಇವರು ಭಾರಿ ಪ್ರಚಾರಕ್ಕೆ ಬಂದಿದ್ದು ಕೊರೋನಾ ಸಂದರ್ಭದಲ್ಲಿ ಹಲವರಿಗೆ ಸಹಾಯ ಮಾಡುವ ಮೂಲಕ. ಆ ಸಮಯದಲ್ಲಿ ಹಲವಾರು ಮಂದಿ ಸೋನು ಅವರನ್ನು ನೆನಪಿಸಿಕೊಂಡಿದ್ದಿದೆ. ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಸೋನು ಸೂದ್ ಅವರಿಗೆ ಇದೀಗ ಇಂಥದ್ದೊಂದು ಪರಿಸ್ಥಿತಿ ಬಂದಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.ಸೋನು ಸೂದ್ ಮತ್ತು ಸೋನಾಲಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

See also  ಬೆಕ್ಕು ಕದ್ದ ಮೂವರು ಯುವತಿಯರು..! ಪ್ರಕರಣ ದಾಖಲು
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget