ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ಸೋನು ಗೌಡ 4 ದಿನ ಪೊಲೀಸ್ ಕಸ್ಟಡಿಗೆ, ಕೋರ್ಟ್ ಹೇಳಿದ್ದೇನು..?

236

ನ್ಯೂಸ್ ನಾಟೌಟ್: ಮಗುವನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಬೆಂಗಳೂರಿನ ಸಿಜೆಎಂ ಕೋರ್ಟ್ ಆದೇಶ ನೀಡಿದೆ. ಮಗು ಪೋಷಕರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಮಹಜರು ಮತ್ತು ಹೇಳಿಕೆ ಪಡೆಯಲು ಕೋರ್ಟ್ ತಿಳಿಸಿದೆ.

ಅಪಾರ್ಟ್ ಮೆಂಟ್ ನ ಅಕ್ಕಪಕ್ಕದ ಸ್ಥಳೀಯರ ಹೇಳಿಕೆ ಪಡೆಯಬೇಕಿದೆ. ಈ ಉದ್ದೇಶ ದಿಂದ ನಾಲ್ಕು ದಿನಗಳ ಕಾಲ ಪೊಲೀಸರು ಈಕೆಯನ್ನು ಕಸ್ಟಡಿ ಗೆ ಕೇಳಿದ್ದರು ಎನ್ನಲಾಗಿದೆ. ಸದ್ಯ ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೋನು ಗೌಡನನ್ನು ಪೊಲೀಸರು ಕಳುಹಿಸಲಿದ್ದಾರೆ ಎನ್ನಲಾಗಿದೆ. ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಅನ್ನು ಇಂದು(ಮಾ.22) ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿತ್ತು.

See also  ಆ 9 ವಿದ್ಯಾರ್ಥಿಗಳು ಕಾಡಿನಲ್ಲಿ ನಿಗೂಢವಾಗಿ ಕಣ್ಮರೆಯಾದದ್ದೇಗೆ..? ಚಾರಣಕ್ಕೆಂದು ಹೋದವರನ್ನು ರಕ್ಷಿಸಿದ್ದೇಗೆ ಅರಣ್ಯ ಇಲಾಖೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget