ಸುಳ್ಯ

ಬಹುಮುಖ ಪ್ರತಿಭೆ ಸೋನಾ ಅಡ್ಕಾರ್ ಗೆ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಪ್ರಶಸ್ತಿ ಪ್ರದಾನ

ನ್ಯೂಸ್ ನಾಟೌಟ್: ಬಹುಮುಖ ಪ್ರತಿಭೆ ಸೋನಾ ಅಡ್ಕಾರ್ ಅವರನ್ನು ಇತ್ತೀಚೆಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ ವತಿಯಿಂದ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಹಾಗೂ ಜಗಜ್ಯೋತಿ ಬಸವೇಶ್ವರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಕಲ್ಯಾಣ ವೇದಿಕೆ (ರಿ.) ಬೆಂಗಳೂರಿನಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಕೆಂಚನೂರು ಶಂಕರ್ ಅವರು ಸೋನಾ ಅಡ್ಕಾರ್ ಗೆ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಹಾಗೂ ಜಗಜ್ಯೋತಿ ಬಸವೇಶ್ವರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸೋನಾ ಅಡ್ಕಾರ್ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೂಭಾ ಶೋಭಾ ಶರತ್ ಅಡ್ಕಾರ್ ದಂಪತಿಯ ಪುತ್ರಿ. ಇವರು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾದ್ಯಮ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Related posts

ಕುತೂಹಲಕ್ಕೆ ತೆರೆ ಎಳೆದ ಕಾಂಗ್ರೆಸ್ ! ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಜಿ. ಕೃಷ್ಣಪ್ಪ ಫೈನಲ್!

ಸುಳ್ಯ:ಬಸ್ ಹತ್ತಲೆಂದು ಹೋದ ಸಂದರ್ಭ ಮಹಿಳೆಗೆ ಬೈಕ್ ಡಿಕ್ಕಿ ,ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಸುಳ್ಯ: ಹಲವೆಡೆ ರಾರಾಜಿಸುತ್ತಿವೆ ಮತದಾನ ಬಹಿಷ್ಕಾರದ ಬ್ಯಾನರ್‌! ಏನಿದರ ಕಾರಣ?