Latestಕ್ರೈಂಸುಳ್ಯ

ಸುಳ್ಯ: ಜೊತೆಯಾಗಿ ಇಲಿ ಪಾಷಾಣ ಸೇವಿಸಿದ ತಾಯಿ-ಮಗ..! 1 ವರ್ಷದ ಹಿಂದೆ ಮದುವೆಯಾಗಿದ್ದ ಮಗ ಸಾವು, ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

2.9k

ನ್ಯೂಸ್ ನಾಟೌಟ್: ಇಲಿ ಪಾಷಾಣ ಸೇವಿಸಿದ ತಾಯಿ ಮಗ ಸುಳ್ಯದ ಆಸ್ಪತ್ರೆಗೆ ದಾಖಲಾಗಿದ್ದು ಘಟನೆಯಲ್ಲಿ ಮಗ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೃತರನ್ನು ನಡುಗಲ್ಲು ನಾಲ್ಕೂರು ಗ್ರಾಮದ ನಿತಿನ್ (32 ವರ್ಷ) ಎಂದು ತಿಳಿದು ಬಂದಿದೆ. ತಾಯಿ ಸುಲೋಚನಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಬ್ಬರೂ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದು ಇಂದು ಅಸ್ವಸ್ಥಗೊಂಡಿರುವುದು ತಿಳಿದು ಬಂದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಿತಿನ್ ಅವರು ಐಟಿಐ ಶಿಕ್ಷಣ ಪಡೆದಿದ್ದರು.

ಕೃಷಿಕರಾಗಿ ದುಡಿಯುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ತಮ್ಮ ಪತ್ನಿ ತವರು ಮನೆಗೆ ಹೋಗಿದ್ದಂತಹ ಸಂದರ್ಭದಲ್ಲಿ ವಿಷ ಸೇವಿಸಿದ್ದಾರೆಂದು ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ.

 

See also  ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು..? ಕೊಡಗಿನ ಬೆಡಗಿಯ ಮೊದಲ ಪ್ರತಿಕ್ರಿಯೆ ಹೇಗಿತ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget