ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಎದೆಯೆತ್ತರಕ್ಕೆ ಬೆಳೆದ ಮಗನ ಎದುರೇ ಹನಿಮೂನ್ ಗೆ ಹೊರಟ ಖ್ಯಾತ ನಟ..! 33 ವರ್ಷದ ಬ್ಯೂಟಿ ಜೊತೆಗೆ 57 ವರ್ಷದ ನಟನ ಹನಿಮೂನ್ ಬಗ್ಗೆ ನೆಟ್ಟಿಗರು ಹೇಳಿದ್ದೇನು?

45
Spread the love

ನ್ಯೂಸ್ ನಾಟೌಟ್: ಪ್ರಖ್ಯಾತ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಇತ್ತೀಚೆಗೆ ತನ್ನ ೫೭ ನೇ ವಯಸ್ಸಿಗೆ 33 ವರ್ಷದ ಉದ್ಯಮಿಯೊಬ್ಬಳನ್ನು ಮದುವೆಯಾಗಿ ಸುದ್ದಿಯಾಗಿದ್ದರು. ಬಹುಭಾಷಾ ನಟನಾಗಿ ಗುರುತಿಸಿಕೊಂಡ ಇವರು, ಖಳನಾಯಕರಾಗಿ ಮತ್ತು ಪೋಷಕ ನಟರಾಗಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದ ಇವರು ಹನಿಮೂನ್ ಗೆ ಹೋಗಿರುವುದಾಗಿ ಕೆಲವು ಫೊಟೋಗಳನ್ನು ದಂಪತಿ ಹಂಚಿಕೊಂಡಿದ್ದು ಅಭಿಮಾನಿಗಳು ಬಗೆ ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದು ಈಗ ಎಲ್ಲಡೆ ಸುದ್ದಿಯಾಗಿದೆ.
57 ವರ್ಷದ ಆಶಿಶ್ ವಿದ್ಯಾರ್ಥಿ ಈ ವರ್ಷದ ಮೇ ತಿಂಗಳಲ್ಲಿ, ಅಸ್ಸಾಂನ 33 ವರ್ಷದ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ವಿವಾಹವಾದರು. ಕೋಲ್ಕತ್ತಾದಲ್ಲಿ ನಡೆದ ಅವರ ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಹಾಜರಿದ್ದರು.
ಆಶಿಶ್ ಈ ಹಿಂದೆ ನಟಿ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು ಮತ್ತು ಅವರಿಗೆ ಅರ್ಥ ವಿದ್ಯಾರ್ಥಿ ಮಗನಿದ್ದಾನೆ.
ಆದರೆ.. ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟರು. ನಂತರ 2ನೇ ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ.

ಹೀಗಾಗಿ ಆಶಿಶ್ ಅವರ ಎರಡನೇ ಮದುವೆಗೆ ಹಲವು ಟೀಕೆಗಳು ಬಂದಿದ್ದವು. ಅವರು ಪ್ರತಿಕ್ರಿಯಿಸಿ,ಮದುವೆಯಾಗುವುದು ಕೇವಲ ದೈಹಿಕ ಸುಖಕ್ಕಾಗಿ ಅಲ್ಲ, ಒಡನಾಡಿಗಾಗಿ ಮದುವೆ ಮಾಡಿದ್ದೇನೆ ಎಂದು ಹೇಳಿದರು. ಆದರೆ ಇದೀಗ ಈ ಜೋಡಿಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

See also  ನನ್ನ ಮಗನಿಗೆ ಶಿಕ್ಷೆ ಆಗಲೇಬೇಕು ಎಂದ ಕೊಲೆಗಾರ ಫಯಾಜ್‌ ತಾಯಿ, ನೇಹಾಳ ಹತ್ಯೆಯ ಬಗ್ಗೆ ಆರೋಪಿಯ ತಾಯಿ ಕಣ್ಣೀರು
  Ad Widget   Ad Widget   Ad Widget   Ad Widget