ಉಪ್ಪಿನಂಗಡಿಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ಗೋಳಿತೊಟ್ಟು: ನೈಲನ್ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಯುವಕ, ತಂದೆಯ ಸಾವಿಗೆ ಮನನೊಂದು ಕೃತ್ಯ ಎಸಗಿದನೇ..?

ನ್ಯೂಸ್ ನಾಟೌಟ್: ಯುವಕನೊಬ್ಬ ನೈಲನ್ ಹಗ್ಗದಿಂದ ಮನೆಯ ಪಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗೋಳಿತೊಟ್ಟುವಿನಿಂದ ವರದಿಯಾಗಿದೆ. ಮೇ 5 ರಂದು ದುರ್ಘಟನೆ ನಡೆದಿದೆ. ಮೃತರನ್ನು ಕಡಬ ಗ್ರಾಮದ ಗೋಳಿತೊಟ್ಟು ಗ್ರಾಮದ ಅನಾಲು ನಿವಾಸಿ ದಿ. ವಾಸಪ್ಪ ಗೌಡರವರ ಪುತ್ರ ಶ್ರೀ ಹರ್ಷ ಗೌಡ (21 ವರ್ಷ) ಎಂದು ಗುರುತಿಸಲಾಗಿದೆ.

ಮೇ4 ರಂದು ರಾತ್ರಿ ಮನೆ ಸಮೀಪ ಚಿಕ್ಕಪ್ಪ ಶೀನಪ್ಪ ಗೌಡರ ಮಗಳ ಮದುವೆಯ ಹಿನ್ನೆಲೆಯಲ್ಲಿ ಔತಣ ಕೂಟವಿತ್ತು. ಈ ಹಿನ್ನೆಲೆಯಲ್ಲಿ ಸಂಜೆಯ ತನಕ ಅಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಿದ್ದಾರೆ. ಹಾಗೆ ಬಂದವರು ವಾಪಸ್ ಔತಣಕೂಟ ನಡೆಯುವತ್ತ ಹೋಗದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೇ 5 ರಂದು ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಬದುಕಿಸುವ ಪ್ರಯತ್ನ ನಡೆಸಲಾಯಿತಾದರೂ ಅಷ್ಟರಲ್ಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೂರು ವರ್ಷಗಳ ಹಿಂದೆ ಮೃತ ವ್ಯಕ್ತಿಯ ತಂದೆ ಸಾವಿಗೀಡಾಗಿದ್ದರು. ಆ ಬಳಿಕ ಆತ ಮಾನಸಿಕವಾಗಿ ಬಹಳಷ್ಟು ನೊಂದಿದ್ದ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Related posts

ಟರ್ಕಿಯಿಂದ ಭಾರತಕ್ಕೆ ಸಾಗುತ್ತಿದ್ದ ಹಡಗನ್ನು ಹೈಜಾಕ್ ಮಾಡಿದ್ಯಾರು? ಭಾರತಕ್ಕೂ ತಟ್ಟಲಿದೆಯಾ ಯುದ್ಧ ಭೀತಿ? ಏನಿದು ಘಟನೆ?

ಸುಳ್ಯ:ಕೆ.ವಿ. ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಟೂಡೆಂಟ್ ಕೌನ್ಸಿಲ್ ಇನಾಗರೇಶನ್ ಕಾರ್ಯಕ್ರಮ

ಮಂಗಳೂರು: ನಾಳೆ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಸಂಸ್ಮರಣಾ ದಿನ ಹಾಗೂ ಶೌರ್ಯ ಪ್ರಶಸ್ತಿ ಪ್ರದಾನ