ಬೆಂಗಳೂರುರಾಜ್ಯ

ಚಂದನ್-ನಿವೇದಿತಾ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಆ ವ್ಯಕ್ತಿ ಯಾರು..? ನಟ, ಬಿಗ್ ಬಾಸ್ ವಿನ್ನರ್ ಪ್ರಥಮ್ ಹೇಳಿದ ಆ ಸತ್ಯ ಯಾವುದು..?

58
Spread the love

ನ್ಯೂಸ್ ನಾಟೌಟ್: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಜೀವನ ಅಂತ್ಯವಾಗಿದೆ. ಇಬ್ಬರು ಕೂಡ ಪರಸ್ಪರ ಒಪ್ಪಿಕೊಂಡು ದೂರವಾಗಿದ್ದಾರೆ ಅನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಇಬ್ಬರ ನಡುವೆ ಯಾರೋ ಒಬ್ಬರು ಹುಳಿ ಹಿಂಡಿದ್ದಾರೆ ಅನ್ನುವ ಮಾತುಗಳು ಕೂಡ ಈಗ ಕೇಳಿ ಬರುತ್ತಿದೆ.

ಈ ಮಾತನ್ನು ಯಾರೋ ಹೇಳಿದ್ದಲ್ಲ. ಸ್ವತಃ ಬಿಗ್ ಬಾಸ್ ವಿನ್ನರ್ ಆಗಿರುವ ನಟ ಪ್ರಥಮ್ ಈ ಬಗ್ಗೆ ಮಾತನಾಡಿದ್ದಾರೆ.

“ಚಂದನ್ ಹಾಗೂ ನಿವೇದಿತಾ ನಡುವೆ ಯಾರೋ ಕೆಲವರು ಹುಳಿ ಹಿಂಡಿದಿದ್ದಾರೆ. ಅಂತಹ ಜನಗಳು ನಿಜವಾಗಲೂ ಉದ್ಧಾರ ಆಗಲ್ಲ. ಅವರಿಗೆ ಒಳ್ಳೆಯದು ಆಗಲ್ಲ. ಈ ಜೋಡಿ ಮತ್ತೆ ಒಂದಾಗಬೇಕು.

ನಾನು ಧ್ರುವ ಸರ್ಜಾ ಅವರಿಂದ ಫೋನ್ ಮಾಡಿಸಿ ಒಮ್ಮೆ ಒಂದು ಮಾಡುವ ಪ್ರಯತ್ನ ಮಾಡುತ್ತೇನೆ. ಚಂದನ್ ಶೆಟ್ಟಿಗೆ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಸಿನಿಮಾವನ್ನು ನೋಡುವಂತೆ ಹೇಳುತ್ತೇನೆ. ಅದನ್ನು ನೋಡಿ ಅವರು ಪಾರ್ವತಿನಾ ಅಪ್ಪಿಕೊಂಡ ಹಾಗೆ ನಿವೇದಿತಾ ಹಗ್ ಮಾಡಿ ಒಂದಾಗಬೇಕು. ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ನಿಂದ ಕೆಲವರು ಸಂಭ್ರಮ ಪಟ್ಟಿರುತ್ತಾರೆ. ಅದಕ್ಕೆ ಆಸ್ಪದ ನೀಡಬಾರದು” ಎಂದು ತಿಳಿಸಿದ್ದಾರೆ.

ನಿವೇದಿತಾ ಹಾಗೂ ಚಂದನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಚ್ಛೇದನದ ಬಗ್ಗೆ ಪೋಸ್ಟ್ ಹಾಕಿದ್ದಾರೆ. ನಾವು ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದನ್ನು ಅವರು ಅದರಲ್ಲಿ ವಿವರಿಸಿದ್ದಾರೆ.

ಚಂದನ್ – ನಿವೇದಿತಾ ಹಲವಾರು ಟಿವಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜನರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಮನೋರಂಜನೆ ನೀಡುತ್ತಿದ್ದ ಜೋಡಿ ಇದ್ದಕ್ಕಿದ್ದಂತೆ ಈ ನಿರ್ಧಾರಕ್ಕೆ ಬಂದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.

ಇಬ್ಬರು ಜೊತೆಯಾಗಲಿ ಮತ್ತೆ ಬದುಕು ಮುಂದುವರಿಸಲಿ ಎಂದು ಜನ ಹಾರೈಸುತ್ತಿದ್ದಾರೆ. ಮತ್ತೊಂದು ಕಡೆಗೆ ಇಬ್ಬರು ಕೂಡ ವಿವಿಧ ಮಾಧ್ಯಮಗಳ ಕಾಮೆಂಟ್ ಬಾಕ್ಸ್ ನಲ್ಲಿ ಜನರಿಂದ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.

ನ್ಯಾಯಾಲಯದ ಮೆಟ್ಟಿಲು ಏರುವ ಸಂದರ್ಭದಲ್ಲಿಯೂ ಇಬ್ಬರು ಕೂಡ ಕೈ ಕೈ ಹಿಡಿದುಕೊಂಡು ಬಂದಿರುವುದು ಕೂಡ ಹಲವರು ಅನುಮಾನ ಪಡುವಂತಾಗಿದೆ. ಮತ್ತೊಂದು ಕಡೆ ಇಬ್ಬರು ಕೂಡ ಗೆಳೆಯರಾಗಿರುತ್ತೇವೆ ಎಂದು ಹೇಳಿದ್ದಾರೆ.

See also  ಸಿಎಂ ಮುಂದೆ ಶರಣಾಗಿದ್ದ 6 ಜನ ನಕ್ಸಲರಿಗೆ ನ್ಯಾಯಾಂಗ ಬಂಧನ..! ಉಳಿದಿರುವ ಏಕೈಕ ನಕ್ಸಲ್ ರವೀಂದ್ರನಿಗಾಗಿ ಹುಡುಕಾಟ..!
  Ad Widget   Ad Widget   Ad Widget   Ad Widget