ಕೊಡಗು

ಮಡಿಕೇರಿ: ಮಹಿಳಾ ಪೊಲೀಸ್ ಫೋಟೋ ಕ್ಲಿಕ್ಕಿಸಿದ ಯುವಕರಿಗೆ ಬಿತ್ತು ತಿನ್ನುವಷ್ಟು ಕಜ್ಜಾಯ..!

192
Spread the love

ಮಡಿಕೇರಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಒಬ್ಬಂಟಿಯಾಗಿದ್ದಾಗ ಕೆಲವು ಸಲ ಪೋಲಿ ಹುಡುಗರು ಫೋಟೋ ಕ್ಲಿಕ್ಕಿಸಿ ಸಾರ್ವಜನಿಕವಾಗಿ ಒದೆ ತಿಂದ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಅಂತೆಯೇ ಇಲ್ಲೊಂದು ಯುವಕರ ತಂಡ ಮಹಿಳಾ ಪೊಲೀಸ್ ವೊಬ್ಬರ ಫೋಟೋವನ್ನು ಸಾರ್ವಜನಿಕವಾಗಿ ಕ್ಕಿಕ್ಕಿಸಿ ಠಾಣೆಯಲ್ಲಿ ಸಖತ್ ಕಜ್ಜಾಯ ತಿಂದ ಪ್ರಕರಣವೊಂದು ನಡೆದಿದೆ.

ಏನಿದು ಘಟನೆ?

ಮೈಸೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಯುವಕರು ಮಡಿಕೇರಿಯ ಹೋಟೆಲ್‌ವೊಂದರಲ್ಲಿ ಉಪಹಾರ ಸೇವಿಸುತ್ತಿದ್ದರು. ಈ ವೇಳೆ ಯುವಕರ ಗುಂಪೊಂದು ಅಲ್ಲೇ ಇದ್ದ ಮಹಿಳಾ ಸಿಬ್ಬಂದಿಯ ಫೋಟೋ ಕ್ಲಿಕ್ಕಿಸಿದೆ. ಇದು ತಿಳಿದ ಬಳಿಕ ಅಲ್ಲಿನ ವಾತಾವರಣವೇ ಬದಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನೇರವಾಗಿ ಯುವಕರನ್ನು ಠಾಣೆಗೆ ಎಳೆದೊಯ್ದು ಪೊಲೀಸ್ ಭಾಷೆಯಲ್ಲಿ ಮಾತನಾಡಿಸಿದ್ದಾರೆ. ಇಲ್ಲದ ಉಸಾಬರಿ ಮಾಡೋಕೆ ಹೋದ ಯುವಕರು ಪ್ರವಾಸದ ಮಧ್ಯದಲ್ಲಿ ಬೇಕಾದಷ್ಟು ಕಜ್ಜಾಯ ತಿಂದುಕೊಂಡು ಈಗ ಮುಚ್ಚಿಕೊಂಡು ಮನೆ ಸೇರಿದ್ದಾರೆ.

See also  ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಮಹಿಳೆಗೆ ನೆರವಾಗಿ
  Ad Widget   Ad Widget   Ad Widget