ಕ್ರೈಂದೇಶ-ಪ್ರಪಂಚದೇಶ-ವಿದೇಶರಾಜ್ಯವೈರಲ್ ನ್ಯೂಸ್

Soldier: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂದೂಕು ಸಿಡಿದು ಯೋಧ ಸಾವು..! ನೈಟ್ ಡ್ಯೂಟಿ ಮುಗಿಸಿ ಕ್ಯಾಂಪ್‌ನತ್ತ ತೆರಳುವ ವೇಳೆ ದುರ್ಘಟನೆ..!

ನ್ಯೂಸ್ ನಾಟೌಟ್: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂದೂಕು ಆಕಸ್ಮಿಕವಾಗಿ ಸಿಡಿದು ರಾಯಚೂರು ಮೂಲದ ಯೋಧರೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ. ಮಾನ್ವಿ ತಾಲೂಕಿನ ಆರ್.ಜಿ ಕ್ಯಾಂಪ್‌ನ ಯೋಧ ರವಿಕಿರಣ್ (37) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಚೆನ್ನೈ ಏರ್‌ಪೋರ್ಟ್ ಸಮೀಪದ ಕಲ್ಪಾಕ್ಕಂ ಬಳಿ ಈ ದುರ್ಘಟನೆ ನಡೆದಿದೆ. ಚೆನ್ನೈನಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲಾಗಿದೆ. ನೈಟ್ ಡ್ಯೂಟಿ ಮುಗಿಸಿ ಕ್ಯಾಂಪ್‌ನತ್ತ ತೆರಳುವ ವೇಳೆ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಗನ್‌ ಆಕಸ್ಮಿಕವಾಗಿ ಸಿಡಿದಿದೆ. ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್ ರೈಫಲ್‌ನ ಬುಲೆಟ್ ರವಿಕಿರಣ್ ಕುತ್ತಿಗೆಯ ಭಾಗಕ್ಕೆ ತಗುಲಿದೆ ಎನ್ನಲಾಗಿದೆ. ಕೇಂದ್ರೀಯ ಔದ್ಯಮಿಕ ಭದ್ರತಾ ಸಂಸ್ಥೆ (CISF) ಯೋಧರಾದ ರವಿಕಿರಣ್ ಕಲ್ಪಾಕ್ಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದರು.

Click 👇

https://newsnotout.com/2024/05/car-collision-and-business-man-son-under-custody/

Related posts

Rameshwaram Cafe: ರಾಮೇಶ್ವರಂ ಕೆಫೆಗೆ ಮತ್ತೊಂದು ಸಂಕಷ್ಟ,ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ..! ಅವಧಿ ಮೀರಿದ ಆಹಾರ ಪದಾರ್ಥಗಳು ವಶಕ್ಕೆ..!

ಶೌಚಕ್ಕೆ ಹೋದ 21 ವರ್ಷದ ಯುವಕ ಕಾಲು ಜಾರಿ ಕಾಲುವೆಗೆ ಬಿದ್ದು ಸಾವು..! 1 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆ..!

ಭಾರತವನ್ನು ವಶಪಡಿಸಿಕೊಂಡು ಮೋದಿಗೆ ಬೇಡಿ ಹಾಕುವೆ ಎಂದ ಪಾಕ್‌ ಸೇನಾಧಿಕಾರಿ..! ಇಲ್ಲಿದೆ ವೈರಲ್ ವಿಡಿಯೋ