ವೈರಲ್ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಸಿದ್ದು – ಡಿಕೆ ಫುಲ್ ಟ್ರೋಲ್! #ಕಾವೇರಿನಮ್ಮದು ಹ್ಯಾಶ್‌ ಟ್ಯಾಗ್ ಈಗ ಟ್ರೆಂಡಿಂಗ್, ಇಲ್ಲಿದೆ ಬಗೆ ಬಗೆಯ ಸಿದ್ದು – ಡಿಕೆ ಟ್ರೋಲ್ ಗಳು

37
Spread the love

ನ್ಯೂಸ್ ನಾಟೌಟ್: ಕರ್ನಾಟಕದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇದೀಗ ಬಂದ್​ಗೆ ಕರೆ ನೀಡಲಾಗಿದೆ.

ರಾಜ್ಯಾದ್ಯಂತ ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ದು, ಸರ್ಕಾರವು ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ನೀರು ಬಿಡುತ್ತಿದ್ದೇವೆ ಎನ್ನುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಟ್ರೋಲಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ರೈತರ ಆಕ್ರೋಶ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಹೋರಾಟಗಳು ನಡೆಯುತ್ತಿವೆ.

ಬಂದ್‌ಗೆ ಅನೇಕ ಸಂಘ ಸಂಸ್ಥೆಗಳು ಬೆಂಬಲ ನೀಡಿವೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲೂ ಕನ್ನಡಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ (ಟ್ವಿಟರ್) ವೇದಿಕೆಯಲ್ಲಿ ‘ಕಾವೇರಿ ನಮ್ಮದು‘ ಎಂಬ ಅಭಿಯಾನ ನಡೆಸಲಾಗುತ್ತಿದೆ. #ಕಾವೇರಿನಮ್ಮದು ಎಂಬ ಹ್ಯಾಶ್‌ ಟ್ಯಾಗ್ ಸಖತ್​ ಟ್ರೆಂಡ್‌ ಆಗುತ್ತಿದೆ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ಅನೇಕ ಸಂಘಟನೆಗಳ ನಾಯಕರು ಮನವಿ ಮಾಡುತ್ತಿದ್ದಾರೆ. ಕಾವೇರಿ ನಮ್ಮದು ಎಂಬ ಅಭಿಯಾನಕ್ಕೆ ಹಲವು ಸಂಘಟನೆಗಳು, ರಾಜಕೀಯ ನಾಯಕರು ಸೇರಿ ಸ್ವಯಂ ಪ್ರೇರಿತರಾಗಿ ಅನೇಕರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ನಾಯಕರು ಕಾವೇರಿ ನಮ್ಮದು ಎಂಬ ಹ್ಯಾಶ್‌ಟ್ಯಾಗ್​ನೊಂದಿಗೆ ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಕಾಂಗ್ರೆಸ್​​ ವಿರುದ್ಧ ಗುಡುಗಿದ್ದಾರೆ. ಮತ್ತೊಂದೆಡೆ ಸಿದ್ಧರಾಮಯ್ಯ ಅವರು ಕರ್ನಾಟಕ ರೈತರ ಹಿತರಕ್ಷಣೆಗೆ ಯಾವಾಗಲೂ ಸಿದ್ಧ ಎಂದು ಪೋಸ್ಟ್ ಮಾಡಿದ್ದಾರೆ. ವಿವಿಧ ಸಂಘಟನೆಗಳು ಸಹ ಈ ಹ್ಯಾಶ್​ಟ್ಯಾಗ್ ಬಳಸಿವೆ.

ತಮಿಳುನಾಡಿಗೆ ನೀರು ಬಿಟ್ಟು ನಮಗೆ ಅನ್ಯಾಯ ಮಾಡಿದರು ಎಂದು ಸಿಎಂ ಸಿದ್ರಾಮಯ್ಯ ಅವರ ಫೋಟೋ ಇಟ್ಟು ರೈತರು ತಿಥಿ ಕಾರ್ಯ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋನ್ನು ಶಕುಂತಲಾ ನಟರಾಜ್ ಎಂಬವರು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

See also  ಹಿಂದೂ ಮಹಿಳೆಗೆ ಮುಸ್ಲಿಂ ವ್ಯಕ್ತಿಯ ರಕ್ತ ನೀಡಲು ನಿರಾಕರಿಸಿದ ವೈದ್ಯ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget