ನ್ಯೂಸ್ ನಾಟೌಟ್: ತುಳುನಾಡಿನ ದೈವಾರಾಧನೆ ಹಾಗೂ ಮಹಿಳೆಯರನ್ನು ಅಶ್ಲೀಲ ಚಿತ್ರಗಳ ಮೂಲಕ ನಿಂದಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಿವರಾಜ್ ಎಚ್.ಕೆ. ಎಂದು ತಿಳಿದು ಬಂದಿದೆ. ಈತನಿಗೆ 37 ವರ್ಷವಾಗಿದೆ.
ಟ್ವಿಟ್ಟರ್‌ನಲ್ಲಿ ನಕಲಿ ಖಾತೆಯನ್ನು ತೆಗೆದು ಶಿವರಾಜ್ ಎಚ್.ಕೆ. ಎಂಬಾತ ಳುನಾಡಿನ ದೈವಾರಾಧನೆ ಹಾಗೂ ಮಹಿಳೆಯರನ್ನು ಅಶ್ಲೀಲ ಚಿತ್ರಗಳ ಮೂಲಕ ನಿಂದಿಸುತ್ತಿದ್ದ. ಈ ಬಗ್ಗೆ ತುಳುನಾಡಿನ ದೈವಾರಾಧನೆ ಮತ್ತು ಸಂರಕ್ಷಣಾ ಯುವ ವೇದಿಕೆ (ರಿ) ಪೊಲೀಸ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಮಂಗಳೂರು ನಗರ ಸೈಬರ್ ಇಕೋನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು 100/2022 ಕಲಂ 67 ಐಟಿ ಕಾಯ್ದೆ ಮತ್ತು 153(ಎ),505(2) ಐಪಿಸಿ ರಂತೆ ದೂರು ದಾಖಲಿಸಿಕೊಂಡಿದ್ದಾರೆ.
ಈ ಪ್ರಕಾರವಾಗಿ ತನಿಖೆ ನಡೆಸಿದಾಗ ಬೆಂಗಳೂರಿನ ಅಮೃತಹಳ್ಳಿಯ ಶಿವರಾಜ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಯ ಪತ್ತೆ ಹಚ್ಚುವ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಮಾರ್ಗದರ್ಶನದಲ್ಲಿ ನಡೆದಿತ್ತು. ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗ್ಡೆ ನೇತೃತ್ವದಲ್ಲಿ ಮಂಗಳೂರು ಕ್ರೈಂ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸತೀಶ್ ಎಂ.ಪಿ. ಸಿಬ್ಬಂದಿ ಪಾಲ್ಗೊಂಡಿದ್ದರು.