ನ್ಯೂಸ್ ನಾಟೌಟ್: ಈಗಿನ ಮದುವೆ ಅಂದರೆ ಫೋಟೋಗ್ರಾಫ್ ಮತ್ತು ವಿಡಿಯೋಗ್ರಾಫ್ ಗಳದ್ದೇ ಅಬ್ಬರ, ಫ್ರಿ ವೆಡ್ಡಿಂಗ್ ಶೂಟ್ ನಿಂದ ಹಿಡಿದು ಫಸ್ಟ್ ನೈಟ್ ವರೆಗೂ ಎಲ್ಲ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ.. ಅಂಥದ್ದೊಂದು ಪೋಸ್ಟ್ ಈಗ ವೈರಲ್ ಆಗಿದ್ದು, ಫೋಟೋ ಶೇರ್ ದಂಪತಿಗಳು ಟೀಕೆಗೆ ಗುರಿಯಾಗಿದ್ದಾರೆ.
ರಾಹುಲ್ ಮತ್ತು ರಾಧಾ 143 ಎಂಬ ಐಡಿ ಹೆಸರಿನ ದಂಪತಿಗಳು ತಮ್ಮ ಫಸ್ಟ್ ನೈಟ್ ಫೋಟೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ ಶೀರ್ಷಿಕೆಯಾಗಿ ‘ಇಂದು ನನ್ನ ನೆಚ್ಚಿನ # ಫೋಟೋಗ್ರಫಿ” ಎಂದು ಬರೆದುಕೊಂಡಿದ್ದಾರೆ.. ದಂಪತಿಗಳು ತಮ್ಮ ಮದುವೆಯ ವಾರ್ಷಿಕೋತ್ಸವವನ್ನು ಗುರುತಿಸಲು ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪೋಸ್ಟ್‌ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಮೊದಲ ಫೋಟೋದಲ್ಲಿ ಹುಡುಗ ಅವಳ ಹಣೆಗೆ ಮುತ್ತಿಡುತ್ತಾನೆ. ಎರಡನೇ ಫೋಟೋ ವಧು ತನ್ನ ಪತಿಗೆ ಚುಂಬಿಸುತ್ತಿರುವುದನ್ನು ತೋರಿಸುತ್ತದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಲೈಕ್ಸ್ ಪಡೆಯುತ್ತಿದೆ. ಈ ಜೋಡಿಯನ್ನು ಕೆಲವರು ಇಷ್ಟಪಟ್ಟರೇ ಇನ್ನೂ ಕೆಲವರು ಟೀಕೆ ಮಾಡಿದ್ದಾರೆ.
Click