ಕ್ರೈಂದೇಶ-ಪ್ರಪಂಚದೇಶ-ವಿದೇಶ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವನೊಂದಿಗೆ ಆಕೆ ಪರಾರಿ..! ಯುವತಿಯ ಶವ ಲಗೇಜ್​​ ಬ್ಯಾಗ್ ​​ನಲ್ಲಿ ಪತ್ತೆ..!

ನ್ಯೂಸ್ ನಾಟೌಟ್: ಶೀತಲ್ ಕೌಶಲ್ 24) ಎಂದು ಗುರುತಿಸಲಾದ ಯುವತಿಯ ಶವ ಹಿಮಾಚಲ ಪ್ರದೇಶದ ಮನಾಲಿಯ ಹೋಟೆಲ್‌ವೊಂದರಲ್ಲಿ ಲಗೇಜ್ ಬ್ಯಾಗ್ ನಲ್ಲಿ ಪತ್ತೆಯಾದ ಘಟನೆ ಶನಿವಾರ(ಮೇ.18). ಸೋಶಿಯಲ್​ ಮೀಡಿಯಾದ ಮೂಲಕ ಪರಿಚಯವಾದ ಆಕೆಯ ಸ್ನೇಹಿತ ವಿನೋದ್ ಠಾಕೂರ್ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿನೋದ್ ಆಕೆಯ ಮೃತ ದೇಹವನ್ನು ಲಾಗೇಜ್​​ ಬ್ಯಾಗ್ ​​ನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂಬುದು ವರದಿಯಾಗಿದೆ. ಸೋಶಿಯಲ್​​ ಮೀಡಿಯಾದ ಮೂಲಕ ಆರೋಪಿ ವಿನೋದ್​​ಗೆ ಪರಿಚಯವಾಗಿದ್ದ ಶೀತಲ್. ಮೇ. 05ರಂದು ಮನೆಯಲ್ಲಿದ್ದ 10 ಸಾವಿರ ದುಡ್ಡಿನೊಂದಿಗೆ ಶೀತಲ್​​ ಮನೆ ಬಿಟ್ಟು ವಿನೋದ್​ ಜೊತೆಗೆ ಓಡಿ ಹೋಗಿದ್ದಾಳೆ.

ಬಳಿಕ ಈ ಜೋಡಿ ಮನಾಲಿಗೆ ತೆರಳಿ ಹೊಟೇಲ್​​​ ಒಂದರಲ್ಲಿ ತಂಗಿದ್ದರು. ಆದರೆ ಬುಧವಾರ(ಮೇ.08) ಮನಾಲಿಯ ಹೊಟೇಲ್​ ಚೆಕ್ ಔಟ್ ಮಾಡುವ ವೇಳೆ ವಿನೋದ್​​ ಒಬ್ಬನನ್ನೇ ಕಂಡು ಹೋಟೆಲ್ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಇದಲ್ಲದೇ ಆತನ ಅಂಗಿಯ ಮೇಲಿನ ರಕ್ತದ ಕಲೆ ಕಂಡು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಆತ ಬ್ಯಾಗ್ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಬುಧವಾರ ತಡರಾತ್ರಿ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

Click 👇

https://newsnotout.com/2024/05/anjali-mother-and-sister-issue
https://newsnotout.com/2024/05/coaching-centre-and-education-centre

Related posts

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಲೆ ಮಾಡಿದ ಕ್ಲಾಸ್‌ ಮೇಟ್

ದೊಡ್ಡ ಗಾತ್ರದ ದೇಹ ಹೊಂದಿದ ಮಹಿಳೆಯಿಂದ ವಿಮಾನಯಾನ ಸಂಸ್ಥೆಗೆ ವಿಶೇಷ ಬೇಡಿಕೆ! ವಿಡಿಯೋ ವೈರಲ್!

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ 15 ಸಿಮ್ ಕಾರ್ಡ್ ಗಳು ಪತ್ತೆ..! ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್..! ತನಿಖೆಯಲ್ಲಿ ಮತ್ತಷ್ಟು ಕರಾಳ ಮುಖ ಬಯಲು..!