ಕರಾವಳಿದಕ್ಷಿಣ ಕನ್ನಡವಿಡಿಯೋವೈರಲ್ ನ್ಯೂಸ್

ಶೋಭಕ್ಕನ ಹಾವು ಹಿಡಿದ ಸಾಹಸಮಯ ವಿಡಿಯೋ ವೈರಲ್, ಯಾರಿವರು ಶೋಭಕ್ಕ..? ಕೊನೆಗೂ ಸಿಕ್ಕಿತು ಉತ್ತರ

ನ್ಯೂಸ್ ನಾಟೌಟ್: ಮಹಿಳೆಯೊಬ್ಬರು ಹೆಬ್ಟಾವು ಹಿಡಿದ ವಿಡಿಯೋವೊಂದು ಕಳೆದ ಎರಡು ದಿನಗಳಿಂದ ಭಾರಿ ವೈರಲ್ ಆಗಿದೆ. ಇದರಲ್ಲಿ ಇರುವ ಮಹಿಳೆ ಯಾರು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಈ ಘಟನೆ ನಡೆದಿರುವುದು ಎಲ್ಲಿ ಅನ್ನುವುದರ ಕುರಿತು ಮಾಹಿತಿ ಇರಲಿಲ್ಲ. ಆದರೆ ಇದೀಗ ಎಲ್ಲ ಅನುಮಾನಗಳಿಗೆ ತೆರೆ ಬಿದ್ದಿದೆ.

ಈ ಘಟನೆ ನಡೆದಿರುವುದು ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ಎಂಬಲ್ಲಿ. ಸಾಹಸಿ ಮಹಿಳೆ ಕುಪ್ಪೆಟ್ಟಿಯ ಶೋಭಾ ಯಾನೆ ಆಶಾ ಎಂದು ತಿಳಿದು ಬಂದಿದೆ. ನೆಕ್ಕಿಲು ಜಾರಿಗೆದಡಿ ಬಾಬು ಮಾಸ್ಟರ್‌ ಎಂಬವರ ತೋಟದಲ್ಲಿ ನ. 3ರ ಸಂಜೆ 3 ಗಂಟೆ ಹೊತ್ತಿಗೆ ಹೆಬ್ಟಾವು ಕಂಡಿತ್ತು. ಈ ವಿಚಾರವನ್ನು ಸ್ಥಳೀಯ ಆಟೋ ಚಾಲಕ ಬಶೀರ್ ಅವರು ಶೋಭಾ ಯಾನೆ ಆಶಾ ಅವರ ಗಮನಕ್ಕೆ ತಂದರು. ಶೋಭಾ ಸ್ಥಳಕ್ಕೆ ಹೋಗಿ ಹಾವನ್ನು ಸಾಹಸಿಕವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕೊಯ್ಯೂರು ಅರಣ್ಯಕ್ಕೆ ಬಿಟ್ಟಿದ್ದಾರೆ. ಆ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿತ್ತು.

Related posts

ಸುಳ್ಯ: ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್‌ನಲ್ಲಿ ಯೋಗ ತರಬೇತಿ ಕಾರ್ಯಕ್ರಮ;ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಮೊದಲನೇ ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು

ಬಸ್ಸಲ್ಲಿ ಗಡದ್ ನಿದ್ರೆಗೆ ಜಾರಿದ ಅಜ್ಜ..!ಬಸ್‌ ನಿಲ್ಲಿಸುವಾಗ ಇಳಿದು ದಾರಿ ತಪ್ಪಿದ ಮೊಮ್ಮಗ..! ಮುಂದೇನಾಯ್ತು?

ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್ ​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ..! 14 ಎಕರೆ ಜಾಗದಲ್ಲಿರುವ ಪಾಳು ಬಿದ್ದ ಮನೆ..!