ಕ್ರೈಂವಿಡಿಯೋವೈರಲ್ ನ್ಯೂಸ್

ರೀಲ್ಸ್‌ ಗಾಗಿ ಹಾವನ್ನೇ ಕಚ್ಚಿ ಹಿಡಿದ ಯುವಕ..! ಮಧ್ಯಾಹ್ನವಾಗುತ್ತಿದಂತೆ ಮೃತ್ಯು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್:‌ ಯುವಕನೋರ್ವ ರೀಲ್ಸ್‌ ಗಾಗಿ ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡ ಘಟನೆ ತೆಲಂಗಾಣದಲ್ಲಿ ಶುಕ್ರವಾರ(ಸೆ.6ರಂದು) ನಡೆದ್ದು ತಡವಾಗಿ ಬೆಳಕಿಗೆ ಬಂದಿದೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸವಾಡ ಮಂಡಲದ ದೇಸಾಯಿಪೇಟ್ ಗ್ರಾಮದ ಹಾವಾಡಿಗನೊಬ್ಬನ ಮಗ ಶಿವ ಎಂಬಾತ ಗ್ರಾಮದ ಕಾಲೋನಿಗೆ ಪ್ರವೇಶಿಸಿದ 6 ಅಡಿಯ ನಾಗರ ಹಾವನ್ನು ಹಿಡಿದು ಗ್ರಾಮದಿಂದ ಹೊರಗೆ ಬಿಡಲು ತೆಗೆದುಕೊಂಡು ಹೋಗುವ ವೇಳೆ ಹುಚ್ಚು ಸಾಹಸವನ್ನು ಮಾಡಿದ್ದಾನೆ.
ಹಾವನ್ನು ತೆಗೆದುಕೊಂಡು ಬಾಯಿಯಲ್ಲಿ ಕಚ್ಚಿ ಹಿಡಿದಿದ್ದಾನೆ. ಇದನ್ನು ಅಲ್ಲಿದ್ದವರು ಅಚ್ಚರಿಗೊಂಡು ವಿಡಿಯೋ ಹಾಗೂ ಫೋಟೋ ತೆಗೆದಿದ್ದಾರೆ. ಆದರೆ ಬಾಯಿಯೊಳಗೆ ಹೋದ ಹಾವು ಯುವಕನಿಗೆ ಕಚ್ಚಿದ್ದು, ಇದು ಆತನ ಗಮನಕ್ಕೆ ಬಂದಿರಲಿಲ್ಲ.

ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಶಿವ ಎಂಬ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆತ ಆದಾಗಲೇ ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Click

https://newsnotout.com/2024/09/operation-conducted-by-fake-doctor-and-boy-nomore-kannada-news/
https://newsnotout.com/2024/09/rajanikanth-jailer-film-villian-kannada-news-airport/
https://newsnotout.com/2024/09/ganapti-pooje-kannada-ddfnews-conflict-for-money-family-issue-karavara/
https://newsnotout.com/2024/09/village-festival-kannada-news-viral-vijayapura-police/

Related posts

ಕರ್ನಾಟಕ ಬಿಜೆಪಿ ಸ್ವಪಕ್ಷೀಯನಿಂದ ಮೋದಿ ವಿರುದ್ಧವೇ ಅವಹೇಳನಕಾರಿ ಮಾತು! ವೈರಲ್ ಆದ ಆಡಿಯೋದಲ್ಲಿ ಅಂತದ್ದೇನಿದೆ?

ಸುಳ್ಯ: ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಪ್ರಕರಣ, ಕೊಡಗು ಮೂಲದ ವ್ಯಕ್ತಿಯನ್ನು ಕಾಂತಮಂಗಲದಲ್ಲಿ ಕೊಂದು ಹಾಕಿರುವ ಶಂಕೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ

ಹಳೆಗೇಟು: ರಿಕ್ಷಾ ಹಾಗೂ ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರು