ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ತನಗೆ ಕಚ್ಚಿದ ಹಾವನ್ನೇ ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ಬಂದ ಭೂಪ..! ಮುಂದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ

238

ನ್ಯೂಸ್ ನಾಟೌಟ್: ತನಗೆ ಕಚ್ಚಿದ ಹಾವನ್ನೇ ವ್ಯಕ್ತಿಯೊಬ್ಬ ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ಬಂದ ಭಯಾನಕ ಘಟನೆಯೊಂದು ಬಿಹಾರದ ಭಾಗಲ್ಪುರದಲ್ಲಿ ನಿನ್ನೆ(ಅ.18) ನಡೆದಿದೆ.

ಪ್ರಕಾಶ್ ಮಂಡಲ್ ಎಂಬ ವ್ಯಕ್ತಿಗೆ ತೋಟದಲ್ಲಿ ಕೆಲಸ ಮಾಡುವ ವೇಳೆ ಕನ್ನಡಿ ಹಾವೊಂದು ಕಚ್ಚಿದೆ. ಕೂಡಲೇ ಎಚ್ಚೆತ್ತ ಪ್ರಕಾಶ್ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ದಾವಿಸಿದ್ದಾನೆ, ಇದನ್ನು ಕಂಡ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ರೋಗಿಗಳು ಗಾಬರಿಗೊಂಡಿದ್ದಾರೆ.

ಹಾವಿನ ಕಡಿತಕ್ಕೆ ಒಳಗಾದ ವ್ಯಕ್ತಿ ಕೈಯಲ್ಲಿ ಹಾವನ್ನು ಹಿಡಿದುಕೊಂಡಿರುವುದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಕಚ್ಚಿದ ಹಾವು ವಿಷಪೂರಿತವಾಗಿದ್ದುದರಿಂದ ವೈದ್ಯರು ಆತಂಕಗೊಂಡಿದ್ದಾರೆ. ಕೊನೆಗೆ ವ್ಯಕ್ತಿಯ ಬಳಿ ಹಾವನ್ನು ಆಸ್ಪತ್ರೆಯ ಹೊರಗೆ ಬಿಡುವಂತೆ ಸೂಚಿಸಿದ್ದು ಅದರಂತೆ ವ್ಯಕ್ತಿ ಹಾವನ್ನು ಆಸ್ಪತ್ರ್ರೆ ಹೊರ ಭಾಗದಲ್ಲಿ ಬಿಟ್ಟು ಬಂದಿದ್ದಾರೆ ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡಿದ್ದಾರೆ.

Click

https://newsnotout.com/2024/10/ratan-tata-cremation-asses-in-arabbi-sea-kannada-news/
https://newsnotout.com/2024/10/madarasa-and-arebic-with-sanstrith-kannada-news-language/
See also  ಅಕ್ರಮ ಗೋಮಾಂಸ ಸಾಗಾಟ, 160 ಕೆಜಿ ಗೋಮಾಂಸ, ಕಾರು ಸಹಿತ ನಾಲ್ವರು ಆರೋಪಿಗಳ ಬಂಧನ…!!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget