ಕ್ರೈಂ

ಹಾವಿಗೆ ಕಿಸ್‌ ಕೊಡಲು ಹೋಗಿ ಯುವತಿ ಎಡವಟ್ಟು..ವಿಡಿಯೋ ವೈರಲ್!

207

ನ್ಯೂಸ್ ನಾಟೌಟ್: ಹಾವುಗಳು ಹೇಳಿ ಕೇಳಿ ವಿಷಜಂತುಗಳು. ಅವುಗಳ ಜೊತೆಗೆ ಹುಡುಗಾಟ ಆಡಿ ಜೀವಕ್ಕೆ ಕುತ್ತು ತಂದುಕೊಂಡ ಅದೆಷ್ಟೋ ಉದಾಹರಣೆಗಳಿವೆ. ಅಂತಹದ್ದೇ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಾರ್ಕ್ ಗೆ ತೆರಳುವ ಹುಡುಗಿಯರು ಅಲ್ಲಿನ ಸಿಬ್ಬಂದಿ ಸಾಕಿರುವ ಹಾವನ್ನು ನೋಡಿ ಖುಷಿ ಪಡುತ್ತಾರೆ. ಹಾವನ್ನು ಕಂಡು ಆಕರ್ಷಿತಳಾದ ಯುವತಿ ಅದನ್ನು ಚುಂಬಿಸಲು ಹೋಗುತ್ತಾಳೆ. ಇಬ್ಬರು ಸಿಬ್ಬಂದಿ ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದರೂ ಕೂಡ ಹಾವು ತಡ ಮಾಡದೆ ಯುವತಿಯ ಮೂಗು ಮತ್ತು ಬಾಯಿಗೆ ಕಚ್ಚಿದೆ. ಆ ಯುವತಿ ಅನಿರೀಕ್ಷಿತ ಹಾವಿನ ದಾಳಿಯಿಂದ ಭಯಭೀತಳಾಗಿದ್ದು, ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾಳೆ.

ಹಾವು ಕಚ್ಚಲು ಆರಂಭಿಸುತ್ತಿದ್ದಂತೆ ಯುವತಿ ಕಿರುಚಲು ಆರಂಭಿಸಿದ್ದಾಳೆ. ಆ ವೇಳೆ ಪಕ್ಕದಲ್ಲಿದ್ದ ಮಹಿಳೆಯೂ ಸ್ನೇಹಿತೆಯನ್ನು ರಕ್ಷಿಸುವಂತೆ ಕೂಗಿದ್ದಾಳೆ. ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.

See also  ಮಕ್ಕಳಾಗಿಲ್ಲ ಎಂದು ಮಹಿಳೆಯ ಭೀಕರ ಕೊಲೆ..! ಬೈಕ್ ಅಪಘಾತವೆಂದು ಬಿಂಬಿಸಿದ ಅತ್ತೆ-ಮಾವ ಅರೆಸ್ಟ್..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget