ಕ್ರೈಂ

ವಿಷದ ಹಾವು ಕಚ್ಚಿ ಗೋಳಿತೊಟ್ಟು ಗ್ರಾಂ.ಪಂ.ಸದಸ್ಯೆ ಸಾವು

792

ನೆಲ್ಯಾಡಿ: ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ವೇಳೆ ವಿಷಕಾರಿ ಹಾವು ಕಚ್ಚಿ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕೊಣಾಲು ಗ್ರಾಮದಲ್ಲಿ ನಡೆದಿದೆ.

ಗೋಳಿತೊಟ್ಟು ಗ್ರಾಮ ಪಂಚಾಯತ್ ಸದಸ್ಯೆ, ಕೊಣಾಲು ಆರ್ಲ ನಿವಾಸಿ ರೋಸಮ್ಮ ಪಿ.ಡಿ.ಯಾನೆ ವಲ್ಸಮ್ಮ (೫೨) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಮಾ.೧೧ರಂದು ರಬ್ಬರ್ ತಮ್ಮದೇ ತೋಟದಲ್ಲಿ ರಾತ್ರಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದಾಗ ದುರಂತ ನಡೆದಿದೆ. ಜೀವ ಉಳಿಸಿಕೊಳ್ಳಲು ರೋಸಮ್ಮ ಪಕ್ಕದ ಮನೆಗೆ ಬಂದಿದ್ದಾರೆ. ಅಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

See also  ಪತ್ನಿ ಜೊತೆ ಮೂರು ಸಾಕುನಾಯಿಗೂ ಜೀವನಾಂಶ ಕೊಡುವಂತೆ ಪತಿಗೆ ಕೋರ್ಟ್‌ ಆದೇಶ! ಏನಿದು ವಿಚಿತ್ರ ತೀರ್ಪು? ಈ ಬಗ್ಗೆ ಆಕೆಯ ಪತಿ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget