ಕೊಡಗು

ಮಡಿಕೇರಿ: ವಿಷಪೂರಿತ ಹಾವು ಕಡಿದು ಯುವಕ ದುರಂತ ಅಂತ್ಯ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಮಂಥರ್ ಗೌಡ

ನ್ಯೂಸ್ ನಾಟೌಟ್ : ಹಾವು ಕಡಿದು ಯುವಕನೋರ್ವ ದಾರುಣ ಅಂತ್ಯ ಕಂಡ ಘಟನೆ ಕೊಡಗಿನ ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿ ನಡೆದಿದೆ.ವಿಷಪೂರಿತ ಹಾವು ಕಡಿದ ಹಿನ್ನಲೆ ಕೂಡಲೇ ಯುವಕ ಮೂರ್ಛೆ ತಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ರಕ್ಷಿತ್‌ ಉಸಿರು ಚೆಲ್ಲಿದ ಯುವಕನೆಂದು ತಿಳಿದು ಬಂದಿದೆ. ಮೂಲತಃ ಈತ ಪಿರಿಯಾಪಟ್ಟಣದವನೆಂದು ತಿಳಿದು ಬಂದಿದೆ.ಈತ ಬೆಂಡೆಬೆಟ್ಟ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.

ಈತ ಜಮೀನಿನ ಕೆಲಸಕ್ಕೆಂದು ಕುಶಾಲನಗರಕ್ಕೆ ಬಂದಿದ್ದ ಎಂದು ಹೇಳಲಾಗಿದ್ದು, ಈ ವೇಳೆ ಜಮೀನು ಕಡೆ ತರಳಿ ಕೆಲಸದಲ್ಲಿ ಮಗ್ನನಾಗಿದ್ದ. ಇದೇ ವೇಳೆ ಯಮನಾಗಿ ಬಂದ ವಿಷಪೂರಿತ ಹಾವು ಕಾಲಿಗೆ ಕಚ್ಚಿದೆ.ಕೂಡಲೇ ಮೂರ್ಛೆ ಬಿದ್ದ ಆತನನ್ನು ಆಸ್ಪತ್ರೆಗೆ ಕರೆಕೊಂಡು ಹೋದರೂ ಮಾರ್ಗ ಮಧ್ಯೆಯಲ್ಲಿಯೇ ಶಾಶ್ವತವಾಗಿ ಕಣ್ಮುಚ್ಚಿದ್ದಾನೆ ಎಂದು ತಿಳಿದು ಬಂದಿದೆ.ವಿಷಯ ತಿಳಿದು ಶಾಸಕ ಮಂತರ್ ಗೌಡ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.

Related posts

ಮಡಿಕೇರಿ: ಗೌಡ ಪ್ರೀಮಿಯರ್ ಲೀಗ್ ಲಾಂಛನ ಬಿಡುಗಡೆ

ಮಡಿಕೇರಿ: ನಿಜಾಮುದ್ದೀನ್ ‘ಕೈ’ ರಾಶಿದ್ ಪತ್ನಿಗೆ ತಾಗಿದ್ದಕ್ಕೆ ಹಲ್ಲೆ..? ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟದ್ದೇಕೆ?

ಕರಿಕೆ ಗ್ರಾಮ ಪಂಚಾಯತ್ ವತಿಯಿಂದ ಧ್ವಜರೋಹಣ ಮತ್ತು ಸ್ವಚ್ಛತಾ ಕಾರ್ಯಕ್ರಮ