ಕರಾವಳಿಕ್ರೈಂ

ಹರಿಹರ: ವಿಷಕಾರಿ ಹಾವು ಕಚ್ಚಿ ಮಹಿಳೆ ದಾರುಣ ಸಾವು, ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ

ನ್ಯೂಸ್ ನಾಟೌಟ್: ವಿಷಕಾರಿ ಹಾವು ಕಚ್ಚಿದ ಪರಿಣಾಮ ಸುಬ್ರಹ್ಮಣ್ಯ ಸಮೀಪದ ಹರಿಹರದಲ್ಲಿ ಮಹಿಳೆಯೊಬ್ಬರು ದಾರುಣ ಸಾವನ್ನಪ್ಪಿರುವ ಘಟನೆ ಇದೀಗ (ಜೂ.೨) ನಡೆದಿದೆ.

ದೇವಮ್ಮ (60 ವರ್ಷ) ಸಾವಿಗೀಡಾದವರು. ಅವರು ಭಾನುವಾರ ಬೆಳಗ್ಗೆ 9.45 ರ ಹೊತ್ತಿಗೆ ಮನೆಯಲ್ಲಿದ್ದ ವೇಳೆ ಹಾವು ಕಚ್ಚಿದೆ. ಕೋಳಿ ಮೊಟ್ಟೆಯನ್ನು ತಿನ್ನುವುದಕ್ಕಾಗಿ ಕೋಳಿ ಕಾಪುವಿನ ಜಾಗಕ್ಕೆ ಹಾವು ಬಂದಿತ್ತು. ಈ ಹಾವು ಇರುವುದು ಮಹಿಳೆಯ ಗಮನಕ್ಕೆ ಬಂದಿರುವುದಿಲ್ಲ. ಅರಿವಿಲ್ಲದೆ ಕಾಪಿನತ್ತ ಹೋದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಮನೆಯವರಿಗೆ ವಿಷಯ ಗೊತ್ತಾಗಲಿಲ್ಲ ಎಂದು ತಿಳಿದು ಬಂದಿದೆ. ಮನೆಯವರಿಗೆ ವಿಷಯ ಗೊತ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸುಳ್ಯದ ಆಸ್ಪತ್ರೆಗೆ ತಲುಪಿದಾಗ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

Related posts

ಸುಳ್ಯ: ಎಂ.ಬಿ. ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೈಯುತ್ತಿದ್ದ ಯಜಮಾನನಿಗೆ ಚಪಾತಿ ಹಿಟ್ಟಿಗೆ ಮೂತ್ರ ಬೆರೆಸಿ ಅಡುಗೆ ಮಾಡುತ್ತಿದ್ದ ಮನೆಕೆಲಸದಾಕೆ..! ಕುಟುಂಬಸ್ಥರಿಗೆ ಅನಾರೋಗ್ಯ ಕಾಡಿದಾಗಲೇ ನೀಚ ಕೃತ್ಯ ಬಯಲಿಗೆ..!

“ಹಿಂದುತ್ವದ ಹೆಸರಲ್ಲಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಶಾಸಕ ಹರೀಶ್ ಪೂಂಜಾ”