ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್

ಹೆಬ್ಬಾವಿನೊಂದಿಗೆ ಪೆಟ್ರೋಲ್ ಬಂಕ್ ಗೆ ಬಂದದ್ದೇಕೆ ಆತ..? ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವನ್ನು ಬಿಡಿಸಿದ್ದು ಹೇಗೆ? ಇಲ್ಲಿದೆ ವೈರಲ್ ವೀಡಿಯೋ

ನ್ಯೂಸ್ ನಾಟೌಟ್: ಹೆಬ್ಬಾವಿನೊಂದಿಗೆ ಪೆಟ್ರೋಲ್ ಬಂಕ್ ಗೆ ಬಂದ ಪಾನಮತ್ತ ವ್ಯಕ್ತಿಯೊಬ್ಬ ತನ್ನ ಫೋಟೊ ಕ್ಲಿಕ್ಕಿಸುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಒತ್ತಾಯಿಸಿದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಬಳಿ ನಡೆದಿದೆ.

ಹೆಬ್ಬಾವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಫೋಟೊ ಕ್ಲಿಕ್ಕಿಸುವಂತೆ ಆತ ಕೋರಿದ್ದಾನೆ. ತಕ್ಷಣವೇ ಹೆಬ್ಬಾವು ಆತನ ಕುತ್ತಿಗೆಗೆ ಸುತ್ತಿಕೊಳ್ಳಲು ಆರಂಭಿಸಿದಾಗ ಪರಿಸ್ಥಿತಿ ಗಂಭೀರವಾಯಿತು. ಇದರಿಂದ ಆತ ಅಲ್ಲೇ ಬಿದ್ದುಬಿಟ್ಟ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಹೇಳಿದ್ದಾರೆ.

“ನಾನು ಎಂದೂ ಹಾವಿನ ಜತೆಗೆ ಹೋರಾಡಿದ್ದಿಲ್ಲ. ಆದರೆ ಚಂದ್ರನ್ ಕಷ್ಟಪಡುತ್ತಿರುವುದನ್ನು ನೋಡಿ, ತಕ್ಷಣವೇ ಗೋಣಿಚೀಲ ತಂದು ಆತನ ಬಳಿಗೆ ಓಡಿಬಂದೆ. ಹೆಬ್ಬಾವಿನ ಬಾಲವನ್ನು ಹಿಡಿದು ಎಳೆಯತೊಡಗಿದೆ. ನಿಧಾನವಾಗಿ ಅದರ ಹಿಡಿತ ಕಡಿಮೆಯಾಗಿ ಕುತ್ತಿಗೆಯಿಂದ ಬಿದ್ದುಬಿಟ್ಟಿತು.

ನನಗೆ ಭಯವಾದರೂ, ಚಂದ್ರನ್ ಜೀವ ಅಪಾಯದಲ್ಲಿದ್ದ ಕಾರಣ ಈ ರಕ್ಷಣಾ ಕಾರ್ಯಕ್ಕೆ ಶಕ್ತಿ ಬಂತು ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಅಭಿಷೇಕ್ ತಿಳಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಚಂದ್ರನ್ ಎಂಬ ವ್ಯಕ್ತಿ ತನ್ನ ಜತೆ ಹೆಬ್ಬಾವನ್ನು ತಂದಿದ್ದ ಎನ್ನಲಾಗಿದೆ.

Related posts

ಕರಿಕೆ: ಜೀಪ್ ಪಲ್ಟಿಯಾಗಿ ಪ್ರಯಾಣಿಕನ ಕಾಲಿಗೆ ಗಂಭೀರ ಗಾಯ, ಕೆವಿಜಿಯಿಂದ ಮಂಗಳೂರು ಆಸ್ಪತ್ರೆಗೆ ಶಿಫ್ಟ್

ರಾತ್ರಿ ಊಟ ಮುಗಿಸಿ ಮಲಗಿದಾತ ಬೆಳಗ್ಗೆ ಏಳಲೇ ಇಲ್ಲ..! ಮಳೆ ಅವಾಂತರಕ್ಕೆ ದುರಂತ ಅಂತ್ಯ ಕಂಡ ಬಡ ಜೀವ

ಮಂಗಳೂರಿನ ಕಲಾವಿದನಿಗೆ ಪ್ರಧಾನಿ ಕಚೇರಿಯಿಂದ ಇದ್ದಕ್ಕಿದ್ದಂತೆ ಬಂತು ಕರೆ..! ಮೋದಿ ರೋಡ್ ಶೋಗೂ ಈ ಕರೆಗೂ ಏನು ಸಂಬಂಧ..? ಇಲ್ಲಿದೆ ಡಿಟೇಲ್ಸ್