ಕರಾವಳಿಕ್ರೈಂಮಂಗಳೂರು

ಮಂಗಳೂರು: ಹೆಬ್ಬಾವಿನ ಮರಿ ಎಂದು ಕೊಳಕು ಮಂಡಲ ಹಾವನ್ನು ಬರಿಗೈಯಲ್ಲಿ ಹಿಡಿದ ವ್ಯಕ್ತಿ..! ಚಿಕಿತ್ಸೆ ಫಲಕಾರಿಯಾಗದೆ ಸಾವು..!

242

ನ್ಯೂಸ್ ನಾಟೌಟ್: ವಿಷ ರಹಿತ ಹೆಬ್ಬಾವಿನ ಮರಿ ಎಂದು ಬಾಲ ಹಿಡಿದುಕೊಂಡ ವ್ಯಕ್ತಿ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ.

ಬಂಟ್ವಾಳ ಮೂಲದ ರಾಮಚಂದ್ರ ಪೂಜಾರಿ ಎಂಬ ವ್ಯಕ್ತಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದರು. 10 ದಿನಗಳ ಹಾವಿನ ಮರಿಯೊಂದನ್ನ ಹಿಡಿದಿದ್ದರು. ಹೆಬ್ಬಾವಿನ ಮರಿ ಅಂದುಕೊಂಡು ಕೊಳಕು ಮಂಡಲಕ್ಕೆ ಕೈ ಹಾಕಿದ್ದರು.

ಬಾಲ ಹಿಡ್ಕೊಂಡು ಜಸ್ಟ್​ ಐದತ್ತು ಸೆಕೆಂಡ್​ ಆಗಿತ್ತಷ್ಟೇ, ಅಷ್ಟರಲ್ಲಾಗಲಿ ರಾಮನಚಂದ್ರಪ್ಪರ ಅಂಗೈಗೆ ಹಾವು ವಿಷಕಾರಿತ್ತು. ಸೆ.4 ರ ಮಧ್ಯಾಹ್ನ ಮನೆಯ ಮೆಟ್ಟಿಲು ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ವಿಷಪೂರಿತ ಕನ್ನಡಿ ಹಾವಿನ ಮರಿಯನ್ನು ಹೆಬ್ಬಾವಿನ ಮರಿ ಎಂದು ಭಾವಿಸಿ ಬರಿಗೈಯಲ್ಲಿ ರಾಮಚಂದ್ರ ಪೂಜಾರಿ ಹಿಡಿದಿದ್ದರು. ಆದರೆ ಏನಾಗಲ್ಲ ಬಿಡು ಅಂತಾ ನಿರ್ಲಕ್ಷ್ಯ ಮಾಡಿದ ವ್ಯಕ್ತಿ ಮರು ದಿನ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿದೆ. ಹಲವು ದಿನಗಳ ಒದ್ದಾಟದ ಬಳಿಕ ನಿನ್ನೆ(ಸೆ.14) ಮೃತಪಟ್ಟಿದ್ದಾರೆ.
ಕೊಳಕು ಮಂಡಲ ಹಾವು ಹಾಗೂ ಹೆಬ್ಬಾವಿನ ಮರಿ ನೋಡೋದಕ್ಕೆ ಒಂದೇ ರೀತಿ ಇರುತ್ತೆ. ಹೀಗಾಗಿ ಮಾಹಿತಿ ಇಲ್ಲದವರೆಲ್ಲಾ ಹಾವನ್ನ ಮುಟ್ಬೇಡಿ ಎಂದು ಉರಗ ತಜ್ಞರು ಹೇಳಿದ್ದಾರೆ.

Click

https://newsnotout.com/2024/09/idli-kannada-news-onam-kerala-palakad-viral-news-police-investigation/
https://newsnotout.com/2024/09/darshan-and-wilson-guarden-naga-kannada-news-viral-news-ccb-police-raid/
https://newsnotout.com/2024/09/doctors-and-kolkatta-case-police-officer-under-arrest-by-cbi-viral-news/
https://newsnotout.com/2024/09/munirathna-case-caste-and-threat-issue-kannada-news-2-days-police-custody/
https://newsnotout.com/2024/09/wife-for-sale-to-repay-the-loan-amount-kannada-news-police-arrested/
https://newsnotout.com/2024/09/cm-siddaramayya-viral-security-issue-news-kannada-vidhana-sowdha/
See also  ಉಪೇಂದ್ರ ನಟನೆಯ ಸಿನಿಮಾದ ದೃಶ್ಯ ಲೀಕ್..! ಕೈ ಮುಗಿದು ಬೇಸರ ಹೊರಹಾಕಿದ ನಿರ್ದೇಶಕ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget