ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಸ್ಲೀಪರ್ ಕೋಚ್ ಬಸ್ ಟೆಂಪೋಗೆ ಡಿಕ್ಕಿ..! 8 ಮಕ್ಕಳು ಸೇರಿದಂತೆ 12 ಮಂದಿ ದುರ್ಮರಣ

193

ನ್ಯೂಸ್ ನಾಟೌಟ್: ಸ್ಲೀಪರ್ ಕೋಚ್ ಬಸ್ ಮತ್ತು ಟೆಂಪೋ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಎಂಟು ಮಕ್ಕಳು ಸೇರಿದಂತೆ ಒಟ್ಟು ಹನ್ನೆರಡು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ಇಂದು(ಅ.20) ನಡೆದಿದೆ.

ರಾಜಸ್ಥಾನದ ಧೋಲ್‌ಪುರದಲ್ಲಿ ಅಪಘಾತ ಸಂಭವಿಸಿದ್ದು, ಸುನಿಪುರ್ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಸ್ಲೀಪರ್ ಕೋಚ್ ಬಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ. 12 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 8 ಮಕ್ಕಳು, 3 ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಪಟ್ಟವರ ಶವಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್‌ ಗೂ ಹಾನಿಯಾಗಿದ್ದು, ಸದ್ಯ ಪೊಲೀಸರು ಬಸ್ ಅನ್ನು ಜಪ್ತಿ ಮಾಡಿದ್ದಾರೆ. ಈ ಅವಘಡ ಸಂಭವಿಸಿದಾಗ ಬಸ್‌ ನ ವೇಗ ತುಂಬಾ ಹೆಚ್ಚಿತ್ತು ಮತ್ತು ಟೆಂಪೋದಲ್ಲಿ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದರು ಎಂದು ತಿಳಿದು ಬಂದಿದೆ.

Click

https://newsnotout.com/2024/10/mudabidre-kannada-news-teacher-5-year-jail-viral-news/
https://newsnotout.com/2024/10/mother-of-kiccha-sudeep-nomore-kannada-news-viral-news/
https://newsnotout.com/2024/10/mangaluru-money-issue-online-whats-app-message-kannada-news/
https://newsnotout.com/2024/10/uppinangady-gundya-kannada-news-forest-department/
https://newsnotout.com/2024/10/viral-news-video-kannada-news-petrol-pump-kannada-news/

See also  ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದಳಾ ಸಾಕ್ಷಿ ಮಲಿಕ್..? ಒಲಿಂಪಿಕ್ಸ್​ ಪದಕ ವಿಜೇತೆ ಹೀಗೆ ಹೇಳಿದ್ದೇಕೆ? ​
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget