ಕರಾವಳಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸಿಂಹಪ್ರಿಯ ಭೇಟಿ,ನೆಚ್ಚಿನ ನಟ-ನಟಿಯನ್ನು ಕಂಡು ಫೋಟೋ ಕ್ಲಿಕ್ಕಿಸಿಕೊಂಡ ಜನ

316

ನ್ಯೂಸ್ ನಾಟೌಟ್ : ತುಳುನಾಡಿನ ಪುಣ್ಯ ಕ್ಷೇತ್ರಗಳೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಟ ಹಾಗೂ ಕಂಚಿನ ಕಂಠದ ವಸಿಷ್ಠ ಸಿಂಹ  ಮತ್ತು ನಟಿ ಹರಿಪ್ರಿಯಾ ಇಂದು ಭೇಟಿ ನೀಡಿದರು.ಈ ಸಂದರ್ಭ ದೇವಳದಲ್ಲಿ ವಸಿಷ್ಠ ಸಿಂಹ ಅವರು ತುಲಾಭಾರ ಸೇವೆ ನೆರವೇರಿಸಿದರು.

ನಂತರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪುನೀತರಾದರು. ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಶಾಲು ಹೊದಿಸಿ ಗೌರವಿಸಿದರು. ಸದಸ್ಯರುಗಳಾದ ಶ್ರೀಮತಿ ಶೋಭಾ ಗಿರಿಧರ್, ಶ್ರೀಮತಿ ವನಜಾ ಭಟ್ ಉಪಸ್ಥಿತರಿದ್ದರು.ಈ ವೇಳೆ ನೂರಾರು ಜನ ನೆರೆದಿದ್ದು, ನೆಚ್ಚಿನ ನಟ ನಟಿಯನ್ನು ಕಂಡು ಫೊಟೋ ಕ್ಲಿಕ್ಕಿಸಿಕೊಂಡರು.

See also  Belthangady:ಬೆಳ್ತಂಗಡಿ: ತಂದೆಯ ಎದುರಲ್ಲೇ ವಿದ್ಯುತ್ ಸ್ಪರ್ಶಿಸಿ ಮಗಳು ಸಾವು, ಪಾರ್ಸೆಲ್ ತರಲು ಓಡಿ ಬಂದ ಮಗಳಿಗೆ ಆಗಿದ್ದೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget