ನ್ಯೂಸ್ ನಾಟೌಟ್: ಬಾಲಿವುಡ್ ನ ಜನಪ್ರಿಯ ಗಾಯಕರಲ್ಲಿ ಒಬ್ಬರಾಗುವ ನೇಹಾ(Neha Kakkar) ಇತ್ತೀಚಿಗೆ ಮೆಲ್ಬೋರ್ನ್ ನಲ್ಲಿ ಆಯೋಜಿಸಿದ್ದ ಶೋವೊಂದಕ್ಕೆ ಮೂರು ಗಂಟೆಗಳ ತಡವಾಗಿ ಬಂದಿದ್ದು, ಜನರ ಆಕ್ರೋಶಕ್ಕೆ ತದನಂತರ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.
ರಾತ್ರಿ 7-30ಗೆ ಆಯೋಜಿಸಿದ್ದ ಶೋಗೆ ರಾತ್ರಿ 10 ಗಂಟೆಗೆ ಬಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ‘ಗೋ ಬ್ಯಾಕ್ ಗೋ ಬ್ಯಾಕ್ ” ಅಂತಾ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ನೇಹಾ ಕಕ್ಕರ್ ವೇದಿಕೆಯಲ್ಲಿಯೇ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು.
ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತಾ ಮಾತನಾಡಿದ ನೇಹಾ ಕಕ್ಕರ್, ನೀವುಗಳು ನಿಜವಾಗಿಯೂ so sweet.ಸುಮಾರು ಹೊತ್ತಿನಿಂದ ಕಾಯುತ್ತಿದ್ದ ಕುಳಿತಿದ್ದೀರಾ. ನನ್ನ ಜೀವನದಲ್ಲಿ ಯಾರನ್ನೂ ಕಾಯಿಸಲ್ಲ. ಇದು ನನಗೆ ಬಹಳಷ್ಟು ಅರ್ಥವಾಗಿದೆ. ಇಂದು ರಾತ್ರಿಯೆಲ್ಲಾ ನಿಮ್ಮೆಲ್ಲರನ್ನು ಮನರಂಜಿಸುತ್ತೇನೆ ಎಂದು ಭಾವಾನಾತ್ಮಕವಾಗಿ ಅಭಿಮಾನಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ.
Neha Kakkar Booed at Melbourne Concert for 3-Hour Delay, Breaks Down on Stage pic.twitter.com/zGYYKIA1KH
— Warpaint Journal (@WarpaintJournal) March 25, 2025
ಆದರೆ, ನೇಹಾ ಕಕ್ಕರ್ ಭಾವನಾತ್ಮಕ ಮಾತುಗಳ ಹೊರತಾಗಿಯೂ ವಿಡಿಯೋಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದರೆ ಮತ್ತೆ ಕೆಲವರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇದು ಭಾರತ ಅಲ್ಲ. ಆಸ್ಟ್ರೇಲಿಯಾ, ಇದು ಭಾರತದ ಐಡಿಯಲ್ ಅಲ್ಲ ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಮೂಲಕ ಟೀಕೆ ಮಾಡಿದ್ದಾರೆ.