ಸಿನಿಮಾ

ಟ್ರೇಡಿಂಗ್ ಹಗರಣ,ಪ್ರಸಿದ್ಧ ಗಾಯಕಿ ನೇಹಾ ಕಕ್ಕರ್ ಬಂಧನ ? ಅಭಿಮಾನಿಗಳು ಶಾಕ್!

226

ನ್ಯೂಸ್‌ ನಾಟೌಟ್‌ :ಜನಪ್ರಿಯ ಗಾಯಕಿ ನೇಹಾ ಕಕ್ಕರ್ (Singer Neha Kakkar) ಅವರು ಬಂಧಿಸಲ್ಪಟ್ಟಿದ್ದಾರೆ ಎನ್ನುವ ಫೋಟೋವೊಂದು ಭಾರಿ ವೈರಲ್ ಆಗುತ್ತಿದೆ.ಟ್ರೇಡಿಂಗ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದಾರೆ ಎನ್ನುವ ಕ್ಯಾಪ್ಷನ್‌ನಲ್ಲಿ ಪೊಲೀಸರು ಅವರನ್ನು ಬಂಧಿಸಿಕೊಂಡು ಹೋಗಿರುವ ಫೋಟೋ ವೈರಲ್‌ ಆಗಿದೆ.

“ನೇಹಾ ಕಕ್ಕರ್ ಅವರ ವೃತ್ತಿಜೀವನಕ್ಕೆ ದುರಂತವಾಗಿ ಅಂತ್ಯವಾಗುತ್ತಿದೆ.ಇಂದು ಬೆಳಗಿನ ಸುದ್ದಿಯು ಎಲ್ಲಾ ಭಾರತೀಯರಿಗೆ ಆಘಾತವಾಗಿದೆ” ಎಂದು ಬಂಧಿಸಿಕೊಂಡು ಹೋಗಿದ್ದಾರೆ ಎಂದು ಫೋಟೋ ಮೇಲ್ಗಡೆ ಬರೆಯಲಾಗಿದೆ.

ಈ ಫೋಟೋದಲ್ಲಿ ನೇಹಾ ಅವರು ಅಳುತ್ತಿದ್ದು, ಫ್ಯಾನ್ಸ್‌ಗಳು ಶಾಕ್‌ಗೆ ಒಳಗಾಗಿದ್ದಾರೆ. ಇದರ ಸತ್ಯಾಸತ್ಯತೆ ಏನು ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.ಫೋಟೋಗಳು ಲಿಂಕ್‌ನೊಂದಿಗೆ ಹೊರಬಿದ್ದಿದ್ದು, ಈ ಲಿಂಕ್‌ ಕ್ಲಿಕ್‌ ಮಾಡಿದಾಗ ಇದರಲ್ಲಿ ನೇಹಾ ಅವರ ಹೆಸರನ್ನು ಬಳಸಿಕೊಂಡು ‘ಎಮರ್ಲಾಡೋ’ ಎಂಬ ಆ್ಯಪ್ ನ ಚಿತ್ರಣ ಕಾಣುತ್ತದೆ.

ಸದ್ಯ ನೇಹಾ ಅವರು ಬಂಧನವಾಗಿರುವ ಫೋಟೋಗಳನ್ನು ʼಎಐʼನಿಂದ ಕ್ರಿಯೇಟ್‌ ಮಾಡಲಾಗಿದ್ದು, ಬಂಧನವಾಗಿರುವ ಫೋಟೋದಲ್ಲಿರುವುದು ಬೇರೆಯೇ ಮಹಿಳೆ ಎನ್ನಲಾಗಿದೆ. ನೇಹಾ ಅವರ ಮುಖವನ್ನು ಆ ಫೋಟೋಗೆ ಹಾಕಲಾಗಿದೆ.ಈ ಹಿಂದೆ ಅಮಿತಾಬ್‌ ಬಚ್ಚನ್‌, ರಣವೀರ್‌ ಸಿಂಗ್‌ ಅವರ ಫೋಟೋಗಳನ್ನು ಕೂಡ ಇದೇ ರೀತಿ ಬಳಸಿಕೊಂಡು ದಾರಿ ತಪ್ಪಿಸುವ ಟ್ರೇಡಿಂಗ್ ಆ್ಯಪ್ ನ ಪ್ರಚಾರ ಮಾಡಲಾಗಿತ್ತು.ಸದ್ಯ ನೇಹಾ ಈ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

See also  ಖ್ಯಾತ ಬಹುಭಾಷಾ ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ..! ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಪೊಲೀಸರಿಗೆ ಧಮ್ಕಿ ಹಾಕಿದ ಗಾಯಕಿ, ಪ್ರಕರಣ ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget