ಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿ ಕೇಸ್ ರೀತಿಯಲ್ಲೆ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣದ ಮತ್ತೊಂದು ಪ್ರಕರಣ ಬಯಲು! ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ..! ಈ ಘಟನೆ ನಡೆದದ್ದು ಎಲ್ಲಿ?

244

ನ್ಯೂಸ್ ನಾಟೌಟ್: ಉಡುಪಿಯ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಸಂತ್ರಸ್ತೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ಪಡೆದು ತನಿಖೆಯನ್ನು ತೀವ್ರಗೊಳಿಸಿದೆ. ಕಳೆದ ತಿಂಗಳು ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಬಳಸಿ ಹಿಂದೂ ವಿದ್ಯಾರ್ಥಿನಿಯ ಖಾಸಗಿ ದೃಶ್ಯ ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಲಾಗಿತ್ತು ಮತ್ತು ಅದು ಅನೇಕ ರಾಜಕೀಯ ತಿರುವನ್ನೂ ಪಡೆದಿತ್ತು.

ಹಿಂದೂ ವಿದ್ಯಾರ್ಥಿನಿ ಔಪಚಾರಿಕವಾಗಿ ದೂರು ದಾಖಲಿಸದಿದ್ದರೂ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಇತ್ತೀಚೆಗೆ ಸಿಐಡಿಗೆ ಹಸ್ತಾಂತರಿಸಿದ್ದರು.

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ ಎಂಬ ವಿವಾದದ ಬೆನ್ನಲ್ಲೇ ಇಂತಹುದೇ ಘಟನೆ ಉತ್ತರ ಪ್ರದೇಶ ಗಾಜೀಪುರದಲ್ಲೂ ಆಗಸ್ಟ್ ೧೦ ರಮದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಾಜೀಪುರ ಸರ್ಕಾರಿ ಹೋಮಿಯೋಪಥಿ (College of Homeopathy) ಕಾಲೇಜಿನ ವಿದ್ಯಾರ್ಥಿನಿ ಮಂತಾಶಾ ಕಝ್ಮಿ (Mantasha Kazmi) ಎಂಬಾಕೆ ಹಾಸ್ಟೆಲ್‌ನಲ್ಲಿ ತನ್ನ ಸಹಪಾಠಿಗಳ (classmate) ಖಾಸಗಿ ಫೋಟೋ, ವಿಡಿಯೋ ಸೆರೆಹಿಡಿದು ಅದನ್ನು ತನ್ನ ಸೀನಿಯರ್‌ ಅಮೀರ್‌ ಎಂಬಾತನಿಗೆ ಕಳುಹಿಸಿಕೊಡುತ್ತಿದ್ದಳು. ಅಮೀರ್‌ ಈ ಫೋಟೋ ಮತ್ತು ವಿಡಿಯೋ ಬಳಸಿ ಸಂತ್ರಸ್ತೆಯನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಎನ್ನಲಾಗಿದೆ.

ಈ ಬೆಳವಣಿಗೆ ಹಿಂದೆ ಕಝ್ಮಿ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ರೂಂಮೇಟ್‌ಗಳು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಕಝ್ಮಿ ಮೊಬೈಲ್‌ ತಪಾಸಣೆ ಮಾಡಿದ ವೇಳೆ ಆಕೆ ಫೋಟೋ ಮತ್ತು ವಿಡಿಯೋ ಸೆರೆಹಿಡಿದು ಅದನ್ನು ಅಮೀರ್‌ಗೆ ರವಾನಿಸಿದ್ದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು 6 ತಿಂಗಳ ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಅದರ ಬೆನ್ನಲ್ಲೇ ಸಂತ್ರಸ್ತ ವಿದ್ಯಾರ್ಥಿನಿಯರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ದೂರು ಆಧರಿಸಿ ಅಮೀರ್‌ (Amir) ಮತ್ತು ಕಝ್ಮಿಯನ್ನು(Kazmi) ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget