ನ್ಯೂಸ್ ನಾಟೌಟ್: ಮೊಬೈಲ್ ಯುಗದಲ್ಲಿ ಯಾರ ಕೈಲಿ ಎಷ್ಟು ಮೊಬೈಲ್ ಗಳಿವೆ, ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂಬುದು ಹಲವರಿಗೆ ತಲೆನೋವಿನ ವಿಷಯ. ಹೆಚ್ಚು ಸಿಮ್‌ಗಳನ್ನು ಇಟ್ಟುಕೊಂಡವರಿಗೆ ಶುಲ್ಕ ವಿಧಿಸಲಾಗುವುದು ಎಂದು ಕೇಂದ್ರ ಪ್ರಧಿಕಾರ ಹೇಳಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಓಡಾಡುತ್ತಿದ್ದಂತೆ ಇದನ್ನು ಕೇಳಿದ ಮೊಬೈಲ್ ಬಳಕೆದಾರರಿಗೆ ಹಲವು ಅನುಮಾನಗಳು ಮೂಡಿವೆ. ಈ ಕುರಿತು ಟೆಲಿಕಾಂ ಆಪರೇಟರ್‌ಗಳನ್ನು ಸಂಪರ್ಕಿಸಿ ಪ್ರಶ್ನೆ ಮಾಡುತ್ತಿದ್ದಾರೆ ಎನ್ನಲಾಗಿದೆ. (SIM Card)
ಇದೀಗ ಕುರಿತು TRAI(Telecom Regulatory Authority of India) ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ. ಹೆಚ್ಚು ಸಿಮ್ ಕಾರ್ಡ್‌ಗಳು ಅಥವಾ ಬಹು ಸಂಖ್ಯೆಯ ಮೊಬೈಲ್ ಸಂಖ್ಯೆ ಹೊಂದಿರುವ ಗ್ರಾಹಕರ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂಬ ಮಾಹಿತಿ ಸಂಪೂರ್ಣ ಸುಳ್ಳು. ಇದೊಂದು ಆಧಾರ ರಹಿತವಾದದ್ದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಸ್ಪಷ್ಟನೆ ನೀಡಿದೆ. ಇಂತಹ ಮಾಹಿತಿಗಳು, ವದಂತಿಗಳನ್ನು ಹರಿಬಿಡುವುದರಿಂದ ಜನರನ್ನು ತಪ್ಪು ದಾರಿಗೆ ಎಳೆದಂತಾಗುತ್ತದೆ ಎಂದು ಪ್ರಾಧಿಕಾರ ಅಭಿಪ್ರಾಯ ತಿಳಿಸಿದೆ.
Click 👇