Latest

ಈ ಲಕ್ಷಣ ಕಂಡುಬಂದಲ್ಲಿ ಹೃದಯದಲ್ಲಿ ಬ್ಲಾಕೇಜ್ ಖಚಿತ!! ಅಪಾಯ ಸಂಭವಿಸೋ ಮುನ್ನ ಜಾಗರೂಕರಾಗಿರಿ

866
Spread the love

ನ್ಯೂಸ್‌ ನಾಟೌಟ್: ಜಗತ್ತಿನಾದ್ಯಂತ ಹೃದಯದ ಸಮಸ್ಯೆಯಿಂದ ಸಾವಿಗೀಡಾಗುತ್ತಿರುವರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ.ಇದೊಮದು ಥರ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ .. ಹೊರ ನೋಟಕ್ಕೆ ಗೊತ್ತೆ ಆಗಲ್ಲ..ಹೀಗಾಗಿ ಹೃದಯ ಸಮಸ್ಯೆ ಇರೋದು ಗೊತ್ತಾಗಲ್ಲ..ಅಪಧಮನಿಗಳಲ್ಲಿನ ಬ್ಲಾಕೇಜ್​ ಹೃದಯ ಕಾಯಿಲೆಗೆ ಪ್ರಮುಖ ಕಾರಣವಾಗಿದ್ದು, ಇದರಿಂದ ಮರಣ ಪ್ರಮಾಣವು ಕೂಡ ಹೆಚ್ಚಾಗುತ್ತಿದೆ.

ಪ್ರತಿದಿನ ಕೊಬ್ಬುಭರಿತ ಜಂಕ್ ಫುಡ್​ ಮತ್ತು ಜಡ ಜೀವನಶೈಲಿಯು ಹೃದಯನ್ನು ಸಂಪರ್ಕಿಸುವ ಅಪಧಮನಿಗಳಲ್ಲಿ ಬ್ಲಾಕೇಜ್​ ಉಂಟುಮಾಡುವ ಪ್ರಮುಖ ಅಂಶಗಳಾಗಿವೆ. ತೆರೆದ ಗಾಳಿಯಲ್ಲಿ ಲಭ್ಯವಿರುವ ಅನಾರೋಗ್ಯಕರ ಆಹಾರಗಳ ಅತಿಯಾದ ಸೇವನೆ ಅವುಗಳಲ್ಲಿರುವ ಕೊಬ್ಬುಗಳು ಸರಿಯಾಗಿ ಜೀರ್ಣವಾಗದೆ ರಕ್ತನಾಳಗಳಲ್ಲಿ ಸಂಗ್ರಹವಾಗುತ್ತವೆ. ಇದು ಅಂತಿಮವಾಗಿ ಬ್ಲಾಕೇಜ್​ಗೆ ಕಾರಣವಾಗುತ್ತವೆ.ಹೃದಯದ ಅಪಧಮನಿಗಳಲ್ಲಿ ಬ್ಲಾಕೇಜ್​ ಆಗಿದ್ದರೆ, ದೇಹವೇ ಕೆಲವೊಂದು ಸಿಗ್ನಲ್​ಗಳನ್ನು ನೀಡುತ್ತವೆ.

ಲಕ್ಷಣಗಳು

1. ಬ್ಲಾಕೇಜ್​​ ಇರುವವರಿಗೆ ಎದೆಯಲ್ಲಿ ನೋವು ಅಥವಾ ಬಿಗಿತದ ಅನುಭವ ಬರುತ್ತದೆ.ಖಿನ್ನತೆ ಇರುವವರಿಗೆ ಎದೆ ನೋವು ಕೂಡ ಉಂಟಾಗುತ್ತದೆ. ವೈದ್ಯಕೀಯ ಪರೀಕ್ಷೆಯ ನಂತರ ಇದನ್ನು ಪತ್ತೆಹಚ್ಚಬಹುದು.

2. ಬ್ಲಾಕೇಜ್ ಇದ್ದವರಿಗೆ ಹೃದಯಕ್ಕೆ ಸಾಕಷ್ಟು ರಕ್ತ ಮತ್ತು ಆಮ್ಲಜನಕ ದೊರೆಯುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಉಸಿರಾಡಲು ಕಷ್ಟ ಸಾದ್ಯ.ಇದರಿಂದಾಗಿ ಕೆಲವರಿಗೆ ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತದೆ.

3. ಹೆಚ್ಚು ಕೆಲಸ ಮಾಡದೆ ತುಂಬಾ ದಣಿದಿದ್ದರೆ ಅಥವಾ ದುರ್ಬಲನಾಗಿದ್ದರೆ, ಅವರ ಹೃದಯಕ್ಕೆ ಹೋಗುವ ರಕ್ತ ಸರಿಯಾಗಿ ಹರಿಯುತ್ತಿಲ್ಲ ಎಂದರ್ಥ. ಆದ್ದರಿಂದ, ಹೃದಯಕ್ಕೆ ಹೋಗುವ ನಾಳಗಳಲ್ಲಿ ಯಾವುದೇ ಅಡಚಣೆ ಇದೆಯೇ ಎಂದು ಪರಿಶೀಲಿಸುವುದು ಅವಶ್ಯಕ.

4. ಹೃದಯದಲ್ಲಿ ಅಪಧಮನಿಗಳು ಮುಚ್ಚಿಹೋಗಿರುವ ಜನರಿಗೆ ಹೃದಯಕ್ಕೆ ಸಾಕಷ್ಟು ರಕ್ತದ ಹರಿವು ಇಲ್ಲದಿರಬಹುದು. ಪರಿಣಾಮವಾಗಿ, ಮೆದುಳಿಗೆ ರಕ್ತದ ಹರಿವು ಕಡಿಮೆಯಾಗಬಹುದು. ಕೆಲವರಿಗೆ, ಆಗಾಗ್ಗೆ ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವುದು ಇದರ ಲಕ್ಷಣಗಳಾಗಿವೆ.

5. ತುಂಬಾ ವೇಗವಾಗಿ ಅಥವಾ ಅನಿಯಮಿತವಾಗಿ ಹೃದಯ ಬಡಿದುಕೊಳ್ಳುತ್ತಿದೆ ಅಂತ ಅನಿಸಿದರೆ, ಹೃದಯಕ್ಕೆ ಹೋಗುವ ರಕ್ತವು ಪಂಪ್ ಮಾಡಲು ಕಷ್ಟಪಡುತ್ತಿದೆ ಎಂದು ಅರ್ಥ. ಹೃದಯಕ್ಕೆ ಹೋಗುವ ದಾರಿಯಲ್ಲಿ ಯಾವುದೇ ಅಡಚಣೆ ಉಂಟಾದರೆ, ಹೃದಯವು ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ ಎಂದರ್ಥ..ಹೀಗಾಗಿ ಹೃದಯ ಸಮಸ್ಯೆ ಸಂಬಂಧ ಪಟ್ಟ ಹಾಗೆ ಏನಾದರೂ ತೊಂದರೆ ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು.

 

 

View this post on Instagram

 

A post shared by News not out (@newsnotout)

See also  ಗುತ್ತಿಗಾರು: ಬೃಹತ್ ರಕ್ತದಾನ ಶಿಬಿರ, ಸನ್ಮಾನ ಮತ್ತು ರಕ್ತ ದಾನಿಗಳಿಗೆ ಗೌರವ ಸಮರ್ಪಣೆ, ರಕ್ತದಾನ ಮಾಡುವ ಮೂಲಕ ಠಾಣಾಧಿಕಾರಿಯ ಮಾದರಿ ನಡೆ, ಯುವ ಸಮುದಾಯ ಮತ್ತು ಹಿರಿಯರು ಸಾಥ್
  Ad Widget   Ad Widget   Ad Widget   Ad Widget