ರಾಜಕೀಯವೈರಲ್ ನ್ಯೂಸ್

‘ಸಿದ್ದರಾಮಯ್ಯರನ್ನು ಮುಗಿಸಲು ಡಿಕೆ ಶಿವಕುಮಾರ್‌ ಪ್ಲಾನ್‌..! ನಂಗೆ ಎಲ್ಲಾ ಗೊತ್ತಿದೆ’ ಎಂದ ಯತ್ನಾಳ್‌

269

ನ್ಯೂಸ್ ನಾಟೌಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಡಿಸಿಎಂ ಡಿಕೆ ಶಿವಕುಮಾರ್‌ ಎಲ್ಲ ಯೋಜನೆ ಮಾಡಿದ್ದಾರೆ. ದಿಲ್ಲಿಯಲ್ಲಿ ಡಿಕೆ ಶಿವಕುಮಾರ್‌ ಯಾರ ಯಾರ ಮನೆಗೆ ಅಡ್ಡಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್‌ ಯತ್ನಾಳ್‌, ಡಿಕೆ ಶಿವಕುಮಾರ್‌ ರಾಜ್ಯದ ಸೂಪರ್ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಗಿಸುವ ಎಲ್ಲ ಯೋಜನೆ ಮಾಡಿದ್ದಾರೆ. ದೆಹಲಿಯಲ್ಲಿ ಡಿಕೆಶಿ ಯಾರ ಯಾರ ಮನೆಗೆ ಅಡ್ಡಾಡಿದ್ದಾರೆ ನನಗೆ ಗೊತ್ತಿದೆ. ಯಾರ್ಯಾರನ್ನು ಬ್ಲಾಕ್‌ ಮೇಲ್‌ ಮಾಡಿದ್ದಾರೆ ನನಗೆ ಗೊತ್ತಿದೆ.

ಸಿದ್ದರಾಮಯ್ಯ ಅವರನ್ನು ಇಳಿಸುವುದಕ್ಕೆ ಡಿಕೆ ಶಿವಕುಮಾರ್‌ ಏನೇನು ಪ್ಲಾನ್‌ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಸೂಕ್ತ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಹೊಸ ಬಾಬ್ ಸಿಡಿಸಿದ್ದಾರೆ.

ಸಿದ್ದರಾಮಯ್ಯ ವೀಕ್ ಆಗಿದ್ದಾರೆ, ಅವರನ್ನ ಡಿಕೆ ಶಿವಕುಮಾರ್‌ ವೀಕ್ ಮಾಡಿದ್ದಾರೆ. ಸಿಎಂ ಮಾತ್ರ ಎಲ್ಲ ಇಲಾಖೆಗಳ ಸಭೆ ತೆಗೆದುಕೊಳ್ಳಬಹುದು, ಡಿಸಿಎಂಗೆ ಆ ಅಧಿಕಾರ ಇಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೆ ಹೆಚ್ಚಿನ ಶಾಸಕರ ಬೆಂಬಲ ಇದೆ, ಡಿಕೆ ಶಿವಕುಮಾರ್‌ ಬೆನ್ನಿಗೆ 15 ಶಾಸಕರು ಮಾತ್ರ ಇದ್ದಾರೆ.

ಸಿದ್ದರಾಮಯ್ಯ ಶಕ್ತಿ ಕಡಿಮೆ ಮಾಡಲು ಡಿಕೆ ಶಿವಕುಮಾರ್‌ ಪ್ಲಾನ್ ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೋವಿದೆ!ಸಿದ್ದರಾಮಯ್ಯ ವಿರುದ್ಧ ಇರೋರನ್ನು ತೆಗೆದುಕೊಂಡು 30-40 ಸೀಟ್ ಮಾಡಿಕೊಳ್ಳೊದು ಡಿಕೆ ಶಿವಕುಮಾರ್‌ ಪ್ಲಾನ್ ಆಗಿದೆ. ಸಿದ್ದರಾಮಯ್ಯ ಸಿಎಂ ಹುದ್ದೆಯಲ್ಲಿ ಸುಮ್ಮನೆ ಕೂತಿದ್ದಾರಷ್ಟೇ. ಸಿದ್ದರಾಮಯ್ಯರದ್ದು ಏನು ನಡೆಯುತ್ತಿಲ್ಲ, ಎಲ್ಲ ಡಿಕೆ ಶಿವಕುಮಾರ್‌ ಅವರದ್ದೇ ನಡೆಯುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯರಿಗೆ ನೋವಿದೆ ಎಂದು ಹೇಳಿದ್ದಾರೆ.

ಯಾವ ಕಾಲಕ್ಕೂ ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ಗೆ ಸಿಎಂ ಹುದ್ದೆ ಬಿಟ್ಟು ಕೊಡಲ್ಲ. ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ, 5 ವರ್ಷವಾಗಲಿ, 5 ತಿಂಗಳಾಗಲಿ‌ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರ್ತಾರೆ. ಡಿಕೆ ಶಿವಕುಮಾರ್‌ಗೆ ಭವಿಷ್ಯದಲ್ಲಿ ಸಿಎಂ ಆಗುವ ಭಾಗ್ಯ ಇಲ್ಲ ಎಂದು ಯತ್ನಾಳ್‌ ಎಮದು ಕೊನೆಗೆ ಹೇಳಿದ್ದಾರೆ.

See also  ಕನಸಿನ ಹುಡುಗನಿಗಾಗಿ 42 ವರ್ಷ ವಯಸ್ಸಿನ ವರೆಗೆ ಮದುವೆಯಾಗದೆ ಕಾದ ಆಕೆ ಕೊನೆಗೆ ಮಾಡಿದ ವಿಚಿತ್ರ ನಿರ್ಧಾರವೇನು? 10 ಲಕ್ಷ ಖರ್ಚು ಮಾಡಿ ತನ್ನನ್ನು ತಾನೇ ಮದುವೆಯಾದ ಈಕೆ ಹೇಳಿದ್ದೇನು? ಏನಿದು ವಿಚಿತ್ರ ಪ್ರೇಮ ಕಥೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget