ಕರಾವಳಿಕೊಡಗುಬೆಂಗಳೂರುರಾಜಕೀಯ

ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆ, ಇಂದು ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಫೈನಲ್ ಪಟ್ಟಿ ಇಲ್ಲಿದೆ..

ನ್ಯೂಸ್ ನಾಟೌಟ್: 135 ಸ್ಥಾನವನ್ನು ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ.ಈಗಾಗ್ಲೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ.ಇವರ ಜೊತೆಗೆ, ಎಂಟು ಹಿರಿಯ ಶಾಸಕರೂ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ್ದಾರೆ. ಇದೀಗ ಕಾಂಗ್ರೆಸ್ ಸರಕಾರ ತನ್ನ ಎರಡನೇ ಸಚಿವ ಸಂಪುಟ ವಿಸ್ತರಣೆಯ ಕಸರತ್ತನ್ನು ನಡೆಸುತ್ತಿದೆ. ಇಂದು (ಮೇ 27) 24 ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸಿ,ಸಂಪುಟಕ್ಕೆ ಇಂದು ಸೇರ್ಪಡೆಯಾಗಲಿದ್ದಾರೆ.

24 ನೂತನ ಸಚಿವರ ಪ್ರಮಾಣವಚನ ಸಿದ್ದರಾಮಯ್ಯ ನೂತನ ಸಚಿವ ಸಂಪುಟದಲ್ಲಿ,,

ಎಚ್‌.ಕೆ.ಪಾಟೀಲ್‌ (ಗದಗ), ಕೃಷ್ಣ ಭೈರೇಗೌಡ(ಬೆಂಗಳೂರು),

ಎನ್‌.ಚಲುವರಾಯಸ್ವಾಮಿ( ಮಂಡ್ಯ), ಕೆ. ವೆಂಕಟೇಶ್ (ಮೈಸೂರು),

ಡಾ. ಎಚ್.ಸಿ.ಮಹದೇವಪ್ಪ ,ಈಶ್ವರ ಖಂಡ್ರೆ ( ಬೀದರ್‌),

ಕೆ.ಎನ್‌.ರಾಜಣ್ಣ( ತುಮಕೂರು), ದಿನೇಶ್‌ ಗುಂಡೂರಾವ್‌(ಬೆಂಗಳೂರು) ,

ಶರಣಬಸಪ್ಪ ದರ್ಶನಾಪುರ( ಯಾದಗಿರಿ) ಶಿವಾನಂದ ಪಾಟೀಲ( ವಿಜಯಪುರ)

ತಮ್ಮಾಪುರ್ ರಾಮಪ್ಪ ಬಾಳಪ್ಪ, ಎಸ್‌.ಎಸ್‌.ಮಲ್ಲಿಕಾರ್ಜುನ( ದಾವಣಗೆರೆ),

ಶಿವರಾಜ ತಂಗಡಗಿ(ಕೊಪ್ಪಳ) ಡಾ.ಶರಣಪ್ರಕಾಶ್ ಪಾಟೀಲ್ (ಕಲಬುರಗಿ),

ಮಂಕಾಳ ವೈದ್ಯ( ಉತ್ತರ ಕನ್ನಡ), ಲಕ್ಷ್ಮಿ ಹೆಬ್ಬಾಳಕರ್‌(ಬೆಳಗಾವಿ),

ರಹೀಂ ಖಾನ್, ಡಿ.ಸುಧಾಕರ್(ಚಿತ್ರದುರ್ಗ) ಸಂತೋಷ್ ಎಸ್. ಲಾಡ್(ಧಾರವಾಡ),

ಎಸ್‌.ಎನ್‌.ಬೋಸರಾಜು( ರಾಯಚೂರು) ಸುರೇಶ್ ಬಿಎಸ್, ಮಧು ಬಂಗಾರಪ್ಪ(ಶಿವಮೊಗ್ಗ)

ಹಾಗೂ ಡಾ. ಎಂಸಿ ಸುಧಾಕರ್(ಚಿಕ್ಕಬಳ್ಳಾಪುರ) ಬಿ.ನಾಗೇಂದ್ರ( ಬಳ್ಳಾರಿ)

ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಭಾವ್ಯ ಪಟ್ಟಿಯಲ್ಲಿದ್ದ ಬಹುತೇಕ ಹೆಸರುಗಳು ಅಂತಿಮ ಪಟ್ಟಿಯಲ್ಲೂ ಇದೆ.ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ. ಪ್ರಮಾಣವಚನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜಭವನಕ್ಕೆ ಶುಕ್ರವಾರ ಮಧ್ಯಾಹ್ನವೇ ಮುಖ್ಯಮಂತ್ರಿ ಸಚಿವಾಲಯ ಸಂದೇಶ ರವಾನಿಸಿತ್ತು. ನೂತನ ಸಚಿವರ ಪಟ್ಟಿಯನ್ನು ಶುಕ್ರವಾರ ರಾತ್ರಿ ರಾಜಭವನಕ್ಕೆ ಕಳುಹಿಸಲಾಗಿದೆ.ಬೆಳಗ್ಗೆ 11.45 -12 ಗಂಟೆಯೊಳಗೆ ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗಿದೆ. 24 ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸುಬ್ರಹ್ಮಣ್ಯ:ಅಪರಿಚಿತ ವ್ಯಕ್ತಿ ಶವ ಪತ್ತೆ,ವಾರಸುದಾರರ ಪತ್ತೆಗೆ ಮನವಿ

ಸುಳ್ಯ:ನೂತನ ಉಪತಹಶೀಲ್ದಾರ್ ಆಗಿ ಮಂಜುನಾಥ್ ನೇಮಕ

ಸುರತ್ಕಲ್ ನಲ್ಲಿ ಬೈಕ್ ಅಪಘಾತ – ರಸ್ತೆಗೆ ಎಸೆಯಲ್ಪಟ್ಟು ಮಡಿಕೇರಿ ಯುವಕ ಮೃತ್ಯು