ಕರಾವಳಿ

ಶ್ವೇತಾ ಚೆಂಗಪ್ಪ ಕುಟುಂಬ ಕೊರಗಜ್ಜನ ಸನ್ನಿಧಿಗೆ ಭೇಟಿ, ನೆಲ ಭೋಜನ ಹರಕೆ ತೀರಿಸಿದ ನಟಿ

252

ನ್ಯೂಸ್ ನಾಟೌಟ್ :ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡೂ ಕಡೆಗಳಲ್ಲಿ ಮಿಂಚಿದ್ದ ನಟಿ ಮತ್ತು ಸದ್ಯಕ್ಕಂತೂ ಕನ್ನಡದ ನೆಚ್ಚಿನ ನಿರೂಪಕಿಯರಲ್ಲಿ ಒಬ್ಬರು ಎಂದರೆ ಅದು ಶ್ವೇತಾ ಚೆಂಗಪ್ಪ (Shwetha Chengappa).ಇದೀಗ ಶ್ವೇತಾ ಚೆಂಗಪ್ಪಾ ಅವರು ದೀಪಾವಳಿ ಹಿನ್ನೆಲೆಯಲ್ಲಿ ತನ್ನ ಫ್ಯಾಮಿಲಿ ಜೊತೆ ಕರಾವಳಿಯಾದ್ಯಂತ ದೇಗುಲ ದರ್ಶನ ಮಾಡಿದ್ದು,ಸ್ವಾಮಿ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಮಂಗಳೂರು, ಉಡುಪಿಯಾದ್ಯಂತ ಕರಾವಳಿಯ ಪ್ರಸಿದ್ಧ ದೇವಾಲಯಗಳ ದರ್ಶನ ಮಾಡಿರುವ ಶ್ವೇತಾ ಚೆಂಗಪ್ಪಾ,ಈ ಕುರಿತಂತೆ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.ಫೋಟೋಗಳನ್ನು ಸಹ ಹಂಚಿಕೊಂಡಿದ್ದು,ಮಂಗಳೂರಿನ ಹಲವಾರು ಪುಣ್ಯ ಕ್ಷೇತ್ರಗಳಿಗೆ ದೀಪಾವಳಿಯ ಸಮಯದಲ್ಲಿ ಕುಟುಂಬದವರೊಂದಿಗೆ ಭೇಟಿ ನೀಡಿದ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ.ಶ್ವೇತಾ ತಮ್ಮ ಪತಿ ಕಿರಣ್ ಅಪ್ಪಚ್ಚು, ಮಗ ಜಿಯಾನ್ ಹಾಗೂ ತಂದೆ ಮತ್ತು ತಾಯಿಯರ ಜೊತೆ ಉಡುಪಿ ಕೃಷ್ಣ ಮಠ (Udupi Shrikrishna Mutt), ಕೊಲ್ಲೂರು ಮೂಕಾಂಬಿಕಾ ದೇವಾಲಯ, ಕದ್ರಿ ಮಂಜುನಾಥ ದೇವಾಲಯ, ಮಂಗಳಾದೇವಿ, ಸ್ವಾಮಿ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿದ್ದಾರೆ. ಉಡುಪಿ ಕೃಷ್ಣ ಮಠದಲ್ಲಿ ನೆಲಭೋಜನ ಹರಕೆಯನ್ನು ಸಹ ಶ್ವೇತಾ ಚೆಂಗಪ್ಪ ದಂಪತಿ ಪೂರ್ಣಗೊಳಿಸಿದ್ದಾರೆ. ದೇವಸ್ಥಾನದಲ್ಲಿ ದೇವರ ದರ್ಶನ ಮನಸ್ಸಿಗೆ ನೆಮ್ಮದಿ ನೀಡಿತು, ಮಂಗಳೂರಿಗೆ ಸುಮಾರು ವರ್ಷಗಳ ನಂತರ ಹೋಗಿದ್ದು.ಮಂಗಳೂರಿನ ಜನತೆಯ ಪ್ರೀತಿಗೆ ನಾನು ಸದಾ ಆಭಾರಿ ಎಂದು ಶ್ವೇತಾ ಬರೆದುಕೊಂಡಿದ್ದಾರೆ.ಇನ್ನು ಮಂಗಳೂರಿನ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರವು ತುಂಬಾನೆ ದೈವೀಕವಾದ ತಾಣವಾಗಿದ್ದು, ಸ್ಯಾಂಡಲ್ ವುಡ್ ನ ಹಲವಾರು ಸೆಲೆಬ್ರಿಟಿಗಳು ಭೇಟಿ ನೀಡಿದ್ದರು.ಇದೀಗ ಶ್ವೇತಾ ಸಹ ಅಜ್ಜನ ದರ್ಶನ ಪಡೆದಿದ್ದಾರೆ.ಮಡಿಕೇರಿಯವರಾದ (Madikeri) ಶ್ವೇತಾ ಚೆಂಗಪ್ಪ, ಸದ್ಯ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ.ಸೀರಿಯಲ್ (Serial),ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಸದ್ಯ ಬಹುಬೇಡಿಕೆಯದ ನಿರೂಪಕಿಯಾಗಿದ್ದಾರೆ (anchor).     

See also  ಪುತ್ತೂರು, ಸುಳ್ಯದಲ್ಲಿ ಬಿಜೆಪಿಯಿಂದ ಯುವಕರಿಗೆ ಟಿಕೇಟ್‌..! ಹೊಸಮುಖಗಳತ್ತ ಹೈಕಮಾಂಡ್‌ ಒಲವು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget