Latestಕ್ರೈಂವಿಡಿಯೋವೈರಲ್ ನ್ಯೂಸ್ಸಿನಿಮಾ

ತನ್ನ ಖಾಸಗಿ ವಿಡಿಯೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿದ ನಟಿ ಶ್ರುತಿ ನಾರಾಯಣನ್..! ಆಕೆ ಬರೆದುಕೊಂಡ ಪೋಸ್ಟ್ ನಲ್ಲೇನಿದೆ..?

355
Spread the love

ನ್ಯೂಸ್‌ ನಾಟೌಟ್: ತಮಿಳಿನ ನಟಿ ಶ್ರುತಿ ನಾರಾಯಣನ್ ಖಾಸಗಿ ವಿಡಿಯೋ ಎನ್ನಲಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಟಿ ರಿಯಾಕ್ಟ್ ಮಾಡಿದ್ದಾರೆ. ನಿಮ್ಮ ತಾಯಿ, ತಂಗಿ ಕೂಡ ನನ್ನಂತೆಯೇ ಹೆಣ್ಣು ವಿಡಿಯೋ ನೋಡಿ ಖುಷಿಪಡಿ ಎಂದು ನಟಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ಹರಿದಾಡುತ್ತಿರುವ ವಿಚಾರ ನಿಮಗೆ ಜೋಕ್ ಅಥವಾ ತಮಾಷೆ ಆಗಿರಬಹುದು. ಆದರೆ ನನಗೆ ನನ್ನ ಕುಟುಂಬಕ್ಕೆ ಇದು ಕಷ್ಟಕರ ಸಂದರ್ಭವಾಗಿದೆ. ಅದರಲ್ಲೂ ನನಗೆ ಇದನ್ನು ನಿಭಾಯಿಸೋದು ಕಷ್ಟಕರವಾಗಿದೆ ಎಂದಿದ್ದಾರೆ. ನಾನು ಒಬ್ಬಳು ಹುಡುಗಿ, ನನಗೂ ಭಾವನೆಗಳಿವೆ. ನನ್ನ ಆಪ್ತರಿಗೂ ಭಾವನೆಗಳಿವೆ. ಅದಕ್ಕೆ ಬೆಲೆ ಕೊಡಿ. ನೀವೆಲ್ಲಾ ಇದನ್ನು ಮತ್ತಷ್ಟು ಕೆಟ್ಟದಾಗಿ ಮಾಡುತ್ತಿದ್ದೀರಿ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಯವಿಟ್ಟು ಆ ವಿಡಿಯೋಗಳನ್ನು ಕಾಡ್ಗಿಚ್ಚಿನಂತೆ ಹಬ್ಬಿಸಬೇಡಿ. ಒಂದು ವೇಳೆ ನೀವು ಹಾಗೆಯೇ ಮಾಡಬೇಕು ಎಂದಿದ್ರೆ, ನಿಮ್ಮ ತಾಯಿ, ಗರ್ಲ್‌ಫ್ರೆಂಡ್, ಸಹೋದರಿ ವಿಡಿಯೋಗಳನ್ನು ವೈರಲ್ ಮಾಡಿ. ಅವರು ಕೂಡ ನನ್ನ ಹಾಗೆಯೇ ದೇಹವನ್ನು ಹೊಂದಿದ್ದಾರೆ. ಹಾಗಾಗಿ ಅವರ ವಿಡಿಯೋ ನೋಡಿ ಖುಷಿಪಡಿ ಎಂದು ಶ್ರುತಿ ನಾರಾಯಣನ್ ಇನ್ಸ್ಟಾಗ್ರಾಂ ಸ್ಟೋರಿ ಬರೆದುಕೊಂಡಿದ್ದಾರೆ. 

ಲೀಕ್ ಆದ ಕೌಸ್ಟಿಂಗ್ ಕೌಚ್ ವಿಡಿಯೋವನ್ನು ನಟಿ ಎಐ ವಿಡಿಯೋ ಎಂದು ಪರೋಕ್ಷವಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದು ರಿಯಲ್ ವಿಡಿಯೋ ಅಲ್ಲ, ಎಂಬುದು ನಟಿಯ ವಾದ. ಇನ್ನೂ ಪ್ರೈವೇಟ್ ಮಾಡಿದ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಮತ್ತೆ ಪಬ್ಲಿಕ್ ಮಾಡಿದ್ದಾರೆ. ಕಾಮೆಂಟ್ ಬಾಕ್ಸ್ ಆಫ್ ಮಾಡಿ ಹೊಸ ಫೋಟೋಶೂಟ್ ಕೂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿಮ್ಯಾನ್ಮಾರ್‌ ನಲ್ಲಿ ಕೇವಲ 1 ಗಂಟೆ ಅಂತರದಲ್ಲಿ 2 ಪ್ರಬಲ ಭೂಕಂಪ..! ಕಟ್ಟಡಗಳು ನೆಲಸಮ, 40ಕ್ಕೂ ಹೆಚ್ಚು ಮಂದಿ ನಾಪತ್ತೆ..!

ಯತ್ನಾಳ್‍ ರನ್ನು ನಾನೇ ಕಾಂಗ್ರೆಸ್‍ ಗೆ ಕರೆದ್ಕೊಂಡು ಬರುತ್ತೇನೆ ಎಂದ ಶಾಸಕ..! ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದ ಕಾಂಗ್ರೆಸ್ ಮುಖಂಡ..!

ರಸ್ತೆಗಳಲ್ಲಿ ನಮಾಜ್ ಮಾಡಿದರೆ ಪಾಸ್ ​ಪೋರ್ಟ್​, ಚಾಲನಾ ಪರವಾನಗಿ ರದ್ದು..! ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್‌ ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ..!

See also  ಪಾಕಿಸ್ತಾನದಲ್ಲಿ ಮತ್ತೆ ಉಗ್ರರ ದಾಳಿ..! 8 ಪಾಕ್ ಭದ್ರತಾ ಸಿಬ್ಬಂದಿ ಸಾವು, 4 ಸೈನಿಕರಿಗೆ ಗಾಯ..!
  Ad Widget   Ad Widget   Ad Widget   Ad Widget   Ad Widget   Ad Widget