ನ್ಯೂಸ್ ನಾಟೌಟ್: ರಾಮಾಯಣದಲ್ಲಿ ಹನುಮಂತ ಇಡೀ ರಾವಣನ ಲಂಕೆಯನ್ನು ಬೆಂಕಿಯಿಂದ ಧಗಧಗಿಸುವಂತೆ ಮಾಡಿದ್ದನ್ನು ತಿಳಿದಿದ್ದೇವೆ, ಆದರೆ ಈಗ ಕಲಿಯುಗದ ಮಂಗವೊಂದು ಶ್ರೀಲಂಕಾವನ್ನು ಒಂದು ದಿನ ಕತ್ತಲೆಯಲ್ಲಿ ಇರಿಸಿತ್ತು. ಭಾನುವಾರ(ಫೆ.11) ಇಡೀ ಶ್ರೀಲಂಕದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಆದರೆ ಇದರ ಹಿಂದೆ ಒಂದು ವಿಚಿತ್ರ ಕಾರಣವಿತ್ತು.
ಶ್ರೀಲಂಕಾದ ವಿದ್ಯುತ್ ಗ್ರಿಡ್ ಉಪ ಕೇಂದ್ರಕ್ಕೆ ಕೋತಿ ಬೆಳಗ್ಗೆ 11.30ರ ಸುಮಾರಿಗೆ ನುಗ್ಗಿತ್ತು. ಆಗ ರಾಷ್ಟ್ರವ್ಯಾಪಿ ವಿದ್ಯುತ್ ವ್ಯತ್ಯಯವನ್ನುಂಟು ಮಾಡಿತು. ಅದಾದ ಬಳಿಕ ಕೆಲವು ಗಂಟೆಗಳ ಕಾಲ ಕೋತಿ ಒಳಗೆ ಇದ್ದ ಕಾರಣ ವಿದ್ಯುತ್ ಸಂಪೂರ್ಣವಾಗಿ ಮರುಸ್ಥಾಪಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ಘಟನೆ ಕೊಲಂಬೋದ ಉಪನಗರದಲ್ಲಿ ನಡೆದಿದೆ. ಶ್ರೀಲಂಕಾದಲ್ಲಿ ವಿದ್ಯುತ್ ಕಡಿತಕ್ಕೆ ಸರಿಯಾದ ಕಾರಣವನ್ನು ಸಿಇಬಿ ಬಹಿರಂಗಪಡಿಸಿಲ್ಲ.
ಕೇವಲ ಮನೆಗಳು ಮಾತ್ರವಲ್ಲ, ಹೋಟೆಲ್, ಆಸ್ಪತ್ರೆ ಸೇರಿದಂತೆ ಎಲ್ಲಿಯೂ ಸುಮಾರು ಒಂದು ಗಂಟೆಗಳ ಕಾಲ ಇಡೀ ಶ್ರೀಲಂಕಾದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು ಎಂದು ವರದಿ ತಿಳಿಸಿದೆ.