ಕರಾವಳಿಪುತ್ತೂರು

23ರಂದು ವೀರಮಂಗಲ ಶ್ರೀ ಕೃಷ್ಣ ಕಲಾ ಕೇಂದ್ರದ ವಿಂಶತಿ ನೃತ್ಯೋತ್ಸವ

310

ನ್ಯೂಸ್ ನಾಟೌಟ್ ಪುತ್ತೂರು: ಶ್ರೀ ಕೃಷ್ಣ ಕಲಾ ಕೇಂದ್ರ ವೀರಮಂಗಲ ಇದರ 20ನೇ ವರ್ಷಾಚರಣೆ ಪ್ರಯುಕ್ತ ವಿಂಶತಿ ನೃತ್ಯೋತ್ಸವ ಹಾಗೂ ಸಾಮೂಹಿಕ ಸಂಜೀವಿನಿ ಮೃತ್ಯುಂಜಯ ಹೋಮ ಏ. 23ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕುಮಾರಧಾರಾ ಸಭಾಭವನದಲ್ಲಿ ನಡೆಯಲಿದೆ.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯಿಂದ ಪುಸ್ತಕ ಬಿಡುಗಡೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ನೃತ್ಯಗೀತಾ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮವನ್ನು ರಾಧಾಕೃಷ್ಣ ಶಗ್ರಿತ್ತಾಯ ಉದ್ಘಾಟಿಸಲಿದ್ದಾರೆ.

ಎಚ್. ಭಾಸ್ಕರ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದ, ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಚಂದ್ರಶೇಖರ ನಾವುಡ, ವಿದುಷಿ ಶ್ರಿಮತಿ ಸುಮಾ ರಾಮ್ ಪ್ರಸಾದ್, ವಿದ್ವಾನ್ ಶ್ರೀ ಸುದರ್ಶನ್ ಎಂ. ಎಲ್. ಭಟ್, ಮತ್ತು ರೂಪಲೇಖ ಪುತ್ತೂರು ಮತ್ತಿತರರು ಉಪಸ್ಥಿತರಿರುವರು. 112 ಮಕ್ಕಳು ನೃತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

See also  ಕಡಬ:ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ,ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget