Uncategorized

ಶ್ರದ್ಧಾಳನ್ನು 35 ಪೀಸ್‌ ಮಾಡಿದ್ದ ಹಂತಕ ಪ್ಲಾನ್ ಮಾಡಿ ಮೃತದೇಹ ಕತ್ತರಿಸಿದ..!

ನ್ಯೂಸ್ ನಾಟೌಟ್ : ರಾ‍ಷ್ಟ್ರ ರಾಜಧಾನಿ ದಿಲ್ಲಿಯನ್ನು ಬೆಚ್ಚಿ ಬೀಳಿಸಿದ್ದು ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣ. ಹಂತಕ ಅಫ್ತಾಬ್ ಪೂನವಾಲ ಗೆಳತಿಯನ್ನು 35 ತುಂಡುಗಳಾಗಿ ಕತ್ತರಿಸಿ ಪ್ರತಿ ದಿನ ಸ್ವಲ್ಪವೇ ದಿಲ್ಲಿಯ ಸುತ್ತಲು ಚೆಲ್ಲಾಡಿದ್ದ. ಇದೀಗ ಆತನ ಕರಾಳ ಕಿಲ್ಲಿಂಗ್ ಹಿಸ್ಟರಿಯ ಒಂದೊಂದೇ ಮುಖಗಳು ಕಳಚಿಕೊಳ್ಳುತ್ತಿವೆ.

ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್‌ ಸಿಕ್ಕಿದ್ದು ಆತ ಶ್ರದ್ಧಾಳನ್ನು ಕೊಂದ ಬಳಿಕ ಮೃತದೇಹವನ್ನು ಕತ್ತರಿಸುವುದಕ್ಕೂ ಮೊದಲು ಹೊರಗಿನ ಪ್ರಪಂಚಕ್ಕೆ ಯಾವುದೇ ವಿಚಾರ ತಿಳಿಯದಂತೆ ಎಚ್ಚರಿಕೆ ವಹಿಸಿದ್ದ. ಅದಕ್ಕಾಗಿ ಹಲವು ಪ್ಲಾನ್ ಮಾಡಿಕೊಂಡಿದ್ದ ಅನ್ನುವ ವಿಚಾರವೂ ಇದೀಗ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಏನೇನು ತಯಾರಿ?

ಅಫ್ತಾಬ್ ಕೊಲೆ ಮಾಡಿದ ಮರು ಕ್ಷಣದಿಂದಲೇ ಪೂರ್ವ ತಯಾರಿಯನ್ನು ಮಾಡಿಕೊಂದಿದ್ದ. ಅಕ್ಕ ಪಕ್ಕದವರಿಗೆ ಒಂದು ಸಣ್ಣ ಕುರುಹೂ ದೊರೆಯದಂತೆ ಸಿದ್ದತೆ ನಡೆಸುತ್ತಿದ್ದ. ನಂತರ ಶ್ರದ್ದಾಳನ್ನು ಮನೆಗೆ ಕೆರೆದುಕೊಂಡು ಬಂದಿದ್ದು ಆ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಯುವತಿ ಕುತ್ತಿಗೆಗೆ ಹಗ್ಗವನ್ನು ಬಿಗಿದು ಕೊಂದಿದ್ದಾನೆ . ಆತಂಕಗೊಂಡು ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ನಿರ್ಧರಿಸಿದ. ಮೃತದೇಹವನ್ನು ಕತ್ತರಿಸಲು ಕುರಿ ಕತ್ತರಿಸುವ ಹರಿತವಾದ ಆಯುಧ ತಂದಿದ್ದ, ಕತ್ತರಿಸುವಾಗ ಶಬ್ದ ಬರಬಾರದೆಂದು ಮನೆಯ ನೀರಿನ ಮೋಟರನ್ನು ಸ್ಟಾರ್ಟ್ ಮಾಡಿದ್ದಾನೆ. ಟಿವಿಯ ಶಬ್ಧ ಜಾಸ್ತಿ ಮಾಡಿದ ನಂತರ ಮೃತದೇಹವನ್ನು ಕತ್ತರಿಸಿ 35 ತುಂಡುಗಳನ್ನಾಗಿ ಮಾಡಿ ಮೂರು ವಾರ ಕಾಲಗಳ ಪ್ರಿಜ್ಹ್ ನಲ್ಲಿ ಇಟ್ಟಿದ್ದ. ನಂತರ ನಗರದ್ಯಾದಂತ ಹಲವು ದಿನಗಳ ಕಾಲ ಬಿಡಿ ಬಿಡಿಯಾಗಿ ಎಸೆದಿದ್ದಾನೆ. ಆದರೆ ತಲೆಯನ್ನು ಮಾತ್ರ ಸುರಕ್ಷಿತವಾಗಿ ಇಟ್ಟಿದ್ದ, ಈ ಸುದ್ದಿಯು ನಗರದಾದ್ಯಂತ ಬೆಚ್ಚಿ ಬೀಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವೈದ್ಯೆ ದೀಪ್ತಿ ಪುರಾಣಿಕ್, ಹೆಚ್ಚಾಗಿ ಕ್ರೈಂ ಸಿನಿಮಾಗಳನ್ನು ನೋಡುವುದರಿಂದ ಇಂತಹ ಹೆಚ್ಚಿನ ಪ್ರಕರಣಗಳು ಆಗಿವೆ ಎಂದು ತಿಳಿಸಿದ್ದಾರೆ.

Related posts

ತಾಲೂಕು ಪಂಚಾಯತ್ ಸದಸ್ಯನ ಜತೆ ಮಾತಾ ವಚನಶ್ರೀ ಪಲ್ಲಂಗದಾಟ

ಕಾಂತಾರ ಸಿನಿಮಾಕ್ಕೂ ಶ್ರೀ ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯಕ್ಕೂ ಇರುವ ನಂಟೇನು?

ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್‌ಗೆ ಮದ್ವೆ ಅಗಿದ್ಯಾ?;ವೈರಲ್ ಫೋಟೋ ನೋಡಿ ನೆಟ್ಟಿಗರು ಏನಂದ್ರು?